ಪತಂಜಲಿ ಮೆಗಾ ಫುಡ್ ಪಾರ್ಕ್: 15 ದಿನ ಸಮಯಾವಕಾಶ ನೀಡಲಿರುವ ಕೇಂದ್ರ
ಲಖನೌ: ಉತ್ತರ ಪ್ರದೇಶದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದ 6,000 ಕೋಟಿ ಮೌಲ್ಯದ ಮೆಗಾ ಫುಡ್ ಪಾರ್ಕ್ ಯೋಜನೆಯನ್ನು ಅನುಮೋದಿಸಲು ಅಗತ್ಯವಿದ್ದ ಷರತ್ತುಗಳನ್ನು ಪೂರೈಸುವುದಕ್ಕೆ ಕೇಂದ್ರ ಸರ್ಕಾರ ಪತಂಜಲಿ ಸಂಸ್ಥೆಗೆ ಮತ್ತೆ 15 ದಿನಗಳ ಸಮಯಾವಕಾಶ ನೀಡುವ ಸಾಧ್ಯತೆ ಇದೆ.
ಮೆಗಾ ಫುಡ್ ಪಾರ್ಕ್ ಯೋಜನೆಯ ಅನುಮೋದನೆಗಾಗಿ ಪತಂಜಲಿ ಸಂಸ್ಥೆ ಭೂಸ್ವಾಧೀನ ಸೇರಿದಂತೆ ಹಲವು ಷರತ್ತುಗಳನ್ನು ಪೂರೈಸಬೇಕಾಗಿದ್ದು, ಜೂ.15 ಕೊನೆಯ ದಿನಾಂಕವಾಗಿತ್ತು. ಆದರೆ ಉತ್ತರ ಪ್ರದೇಶ ಸರ್ಕಾರ ಕೇಂದ್ರ ಆಹಾರ ಸಂಸ್ಕರಣಾ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದು, ಜೂ.30 ವರೆಗೆ ಗಡುವು ವಿಸ್ತರಿಸಬೇಕೆಂದು ಕೇಳಿದೆ.
ಸಂಸ್ಥೆ ಈಗಾಗಲೇ ಕ್ರಮ ಕೈಗೊಳ್ಳುತ್ತಿದ್ದು, 15 ದಿನಗಳ ಕಾಲಾವಕಾಶ ಕೇಳಿದ್ದು, ಸಚಿವಾಲಯ ಹೆಚ್ಚಿನ ಕಾಲಾವಕಾಶ ನೀಡುವ ಸಾಧ್ಯತೆ ಇದೆ ಎಂದು ಆಹಾರ ಸಂಸ್ಕರಣೆ ಕಾರ್ಯದರ್ಶಿ ಜೆಪಿ ಮೀನಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics