ನವದೆಹಲಿ; ಅಣೆಕಟ್ಟು ಸುರಕ್ಷತಾ ಮಸೂದೆ 2018ನ್ನು ಸಂಸತ್ತಿನಲ್ಲಿ ಪರಿಚಯಿಸುವ ಬಗೆಗಿನ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ಜಲಾಶಯಗಳ ರಕ್ಷಣೆ, ಸುರಕ್ಷತೆಗಾಗಿ ಏಕರೂಪ ಸುರಕ್ಷತಾ ಕ್ರಮಗಳ ಅಳವಡಿಕಗೆಗೆ ಸಂಬಂಧಿಸಿದ ಕಾಯ್ದೆ ಇದಾಗಿದೆ.
ಮಸೂದೆಯಿಂದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಣೆಕಟ್ಟು ಸುರಕ್ಷತೆಯ ಬಗೆಗೆ ಏಕರೂಪ ಕಾರ್ಯವಿಧಾನಗಳನ್ನು ಅಳವಡಿಸಲು ಇದು ಸಹಕಾರಿಯಾಗಿದೆ.
ಇದರಿಂದ ಅಣೆಕಟ್ಟುಗಳ ಸುರಕ್ಷತೆ ಮತ್ತು ಅದರಿಂದಾಗುವ ಉಪಯೋಗಗಳ ಸಂರಕ್ಷಣೆ ಖಾತ್ರಿಗೊಳ್ಳುತ್ತದೆ. ಮಾನವನ ಜೀವನ, ಜಾನುವಾರು, ಆಸ್ತಿಗಳ ಸುರಕ್ಷತೆಯೂ ಇದರಿಂದ ಸಾಧ್ಯವಾಗಲಿದೆ.
ಭಾರತೀಯ ತಜ್ಞರು ಮತ್ತು ಅಂತರಾಷ್ಟ್ರೀಯ ತಜ್ಞರೊಂದಿಗೆ ವಿಸ್ತೃತ ಚರ್ಚೆ ಮಾಡಿದ ಬಳಿಕವಷ್ಟೇ ಈ ಮಸೂದೆಯ ಕರಡು ಅಂತಿಮಗೊಳ್ಳಲಿದೆ.
ಅಣೆಕಟ್ಟುಗಳಲ್ಲಿ ಸಮರ್ಪಕ ಕಣ್ಗಾವಲು, ಪರಿಶೀಲನೆ, ಕಾರ್ಯಾಚರಣೆ, ನಿರ್ವಹಣೆಗಳನ್ನು ಈ ಮಸೂದೆ ಪ್ರತಿಪಾದಿಸಲಿದೆ. ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಮಂಡಳಿ ರಚನೆಯನ್ನು ಕಾಯ್ದೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos