ದೇಶ

ಗ್ರಾಮೀಣ ಕ್ಷೇತ್ರ ಸೇರಿ ಎಲ್ಲರಿಗಾಗಿ ಡಿಜಿಟಲ್ ಇಂಡಿಯಾ- ಪ್ರಧಾನಿ ಮೋದಿ

ಹೆಚ್ಚಿನ ಜನರು ತಂತ್ರಜ್ಞಾನದ ಅನುಕೂಲ ಪಡೆಯಲು , ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಸಂಪರ್ಕಕ್ಕಾಗಿ ಡಿಜಿಟಲ್ ಇಂಡಿಯಾ ಪ್ರಚಾರಾಂದೋಲನವನ್ನು ಆರಂಭಿಸಿದ್ದಾಗಿ ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.

ನವದೆಹಲಿ:  ಹೆಚ್ಚಿನ ಜನರು ತಂತ್ರಜ್ಞಾನದ ಅನುಕೂಲ ಪಡೆಯಲು , ವಿಶೇಷವಾಗಿ ಗ್ರಾಮೀಣ ಪ್ರದೇಶಗಳ  ಸಂಪರ್ಕಕ್ಕಾಗಿ ಡಿಜಿಟಲ್ ಇಂಡಿಯಾ  ಪ್ರಚಾರಾಂದೋಲನವನ್ನು ಆರಂಭಿಸಿದ್ದಾಗಿ  ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.
ಡಿಜಿಟಲ್ ಇಂಡಿಯಾ ಫಲಾನುಭವಿಗಳೊಂದಿಗೆ ಇಂದು ಸಂವಾದ ನಡೆಸಿದ ಅವರು,  ದೇಶಾದ್ಯಂತ ಇರುವ ಸಾಮಾನ್ಯ ಸೇವಾ ಕೇಂದ್ರಗಳು ಮಹತ್ವದ ವಿದ್ಯುನ್ಮಾನ ಸೇವೆಗಳನ್ನು ಒದಗಿಸುತ್ತಿದ್ದು, ಹೊಸ ಉದ್ಯೋಗಾವಕಾಶ ಸೃಷ್ಟಿಸುವ ಮೂಲಕ ನಾಗರಿಕರನ್ನು ಬಲವರ್ಧನೆಗೊಳಿಸಲಾಗುತ್ತಿದೆ ಎಂದರು.
ತಂತ್ರಜ್ಞಾನದಿಂದಾಗಿ ರೈಲು ಟಿಕೆಟ್ ಗಳನ್ನು ಅಂತರ್ಜಾಲದಲ್ಲಿಯೇ ಬುಕ್ ಮಾಡಬಹುದಾಗಿದೆ. ಬಿಲ್ ಗಳನ್ನು ಆನ್ ಲೈನ್ ನಲ್ಲಿಯೇ ಪಾವಸಬಹುದಾಗಿದೆ. ಇವೆಲ್ಲಾವುಗಳಿಂದ ಉತ್ತಮ ಸಂಪರ್ಕ ಏರ್ಪಟ್ಟಿದ್ದು, ಜನರಿಗೆ ತುಂಬಾ ಪ್ರಯೋಜನವಾಗಿದೆ ಎಂದರು.
ತಂತ್ರಜ್ಞಾನ ಸೌಲಭ್ಯಗಳು ಕೆಲವೇ ಆಯ್ದ ವ್ಯಕ್ತಿಗಳಿಗೆ ಸೀಮಿತಗೊಳಿಸಬಾರದು , ಸಮಾಜದ ಎಲ್ಲಾ ವರ್ಗದವರಿಗೂ ದೊರಕುವಂತಾಗಬೇಕು, ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕವನ್ನು ಇನ್ನಷ್ಟು ಬಲಗೊಳಿಸಲಾಗುವುದು ಎಂದು ಹೇಳಿದರು.
ಉತ್ತರ ಪ್ರದೇಶ, ಹರಿಯಾಣ , ರಾಜಸ್ತಾನ, ನಾಗಾಲ್ಯಾಂಡ್,  ರಾಜ್ಯಗಳ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಮೋದಿ, ಹೆಚ್ಚಿನ ಡಿಜಿಟಲ್ ಪಾವತಿ ಮೂಲಕ   ಗ್ರಾಮಗಳ ಮಟ್ಟದ ಉದ್ಯಮಗಳ ಸಮೂಹವನ್ನು ಸೃಷ್ಟಿಸುತ್ತಿದ್ದು, ಮಧ್ಯವರ್ತಿಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT