ದುಃಖತಪ್ತ ಕುಟುಂಬಸ್ಥರು 
ದೇಶ

ಹಂತಕರನ್ನು 72 ಗಂಟೆಗಳಲ್ಲಿ ಸಾಯಿಸಿ: ಹತ್ಯೆಯಾದ ಯೋಧ ಔರಂಗಜೇಬ್ ತಂದೆಯಿಂದ ಕೇಂದ್ರಕ್ಕೆ ಗಡುವು

ಪುತ್ರನನ್ನು ಅಪಹರಿಸಿ, ಹತ್ಯೆಗೈದ ಉಗ್ರರನ್ನು 72 ಗಂಟೆಗಳಲ್ಲು ಹುಡುಕಿ ಸಾಯಿಸಿ ಎಂದು ಹತ್ಯೆಯಾದ ಯೋಧ ಔರಂಗಜೇಬ್ ತಂದೆ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಗಡುವು ನೀಡಿದ್ದಾರೆ...

ಜಮ್ಮು: ಪುತ್ರನನ್ನು ಅಪಹರಿಸಿ, ಹತ್ಯೆಗೈದ ಉಗ್ರರನ್ನು 72 ಗಂಟೆಗಳಲ್ಲು ಹುಡುಕಿ ಸಾಯಿಸಿ ಎಂದು ಹತ್ಯೆಯಾದ ಯೋಧ ಔರಂಗಜೇಬ್ ತಂದೆ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಗಡುವು ನೀಡಿದ್ದಾರೆ. 
ಹತ್ಯೆಯಾದ ಯೋಧ ಔರಂಗಜೇಬ್ ತಂದೆ ಮಾಧ್ಯಮಗಳೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. 
ಪುತ್ರನನ್ನು ಹತ್ಯೆಗೈದವರ ವಿರುದ್ಧ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿಲ್ಲವೇಕೆ? ಹಂತಕರ ವಿರುದ್ಧ ಕಠಿಣ ಕೈಗೊಳ್ಳಲು ಭಾರತ ಸರ್ಕಾರವನ್ನು ಅದು ಯಾವ ಶಕ್ತಿ ತಡೆಯುತ್ತಿದೆ? ಎಂದು ಪ್ರಶ್ನಿಸಿದ್ದಾರೆ. 
ಹಂತಕರನ್ನು ಹುಡುಕಿ ಹತ್ಯೆ ಮಾಡಲು ಕೇಂದ್ರ ಸರ್ಕಾರಕ್ಕೆ ಈ ಮೂಲಕ 72 ಗಂಟೆಗಳ ಕಾಲ ಗಡುವು ನೀಡುತ್ತಿದ್ದೇನೆ. 72 ಗಂಟೆಗಳಲ್ಲಿ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಹೋದರೆ, ಪುತ್ರನನ್ನು ಹತ್ಯೆಗೈದವರ ವಿರುದ್ಧ ನಾನು ದ್ವೇಷ ತೀರಿಸಿಕೊಳ್ಳುತ್ತೇನೆಂದು ತಿಳಿಸಿದ್ದಾರೆ. 
ಔರಂಗಜೇಬ್ ಅವರ ತಂದೆ ಕೂಡ ನಿವೃತ್ತ ಯೋಧರಾಗಿದ್ದು, ಪುತ್ರನ ಹತ್ಯೆ ಪ್ರಕರಣ ಕುರಿತಂತೆ ರಾಜಕೀಯ ಮಾಡುತ್ತಿರುವವರ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. 
ಪುತ್ರನ ಹತ್ಯೆ ನಮ್ಮ ಕುಟುಂಬಕ್ಕೆ ಆದ ಹಿನ್ನಡೆಯಷ್ಟೇ ಅಲ್ಲ. ಸೇನೆಗೂ ಕೂಡ ಹಿನ್ನಡೆಯುಂಟಾಗಿದೆ. 2003ರಿಂದಲೂ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟಹಾಕಲು ಸರ್ಕಾರಕ್ಕೆ ಆಗುತ್ತಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವಾದರೂ ಪರಿಸ್ಥಿತಿ ಸುಧಾರಿಸಬಹುದು ಎಂದುಕೊಂಡಿದ್ದೆವು. ಆದರೆ, ಇದರಿಂದ ಅಂತಹ ದೊಡ್ಡ ಬದಲಾವಣೆಗಳಾವುದೂ ಕಂಡು ಬರಲಿಲ್ಲ. 
ಪುತ್ರನ ಸಾವಿನಲ್ಲಿ ರಾಜಕೀಯ ಮಾಡುತ್ತಿರುವ ಪ್ರತ್ಯೇಕತಾವಾದಿಗಳು ಹಾಗೂ ಇತರರನ್ನು ಕಾಶ್ಮೀರದಿಂದಲೇ ಹೊರ ಹಾಕಬೇಕು. ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿರುವವರ ವಿರುದ್ಧ ಭದ್ರತಾ ಪಡೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಈ ಬಾರಿಯ ರಂಜಾನ್ ಹಬ್ಬವನ್ನು ಪುತ್ರನೊಂದಿಗೆ ಆಚರಿಸಬೇಕೆಂದು ಆಸೆ ಪಟ್ಟಿದ್ದೆವು. ಆದರೆ, ಆ ಆಸೆ ಪೂರ್ಣಗೊಳ್ಳಲೇ ಇಲ್ಲ ಎಂದು ದುಃಖದಿಂದ ನುಡಿದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ