ಸಾಂದರ್ಭಿಕ ಚಿತ್ರ 
ದೇಶ

ವಿವಿಗಳಲ್ಲಿ ಪ್ರತಿವರ್ಷ ಘಟಿಕೋತ್ಸವ ಕಡ್ಡಾಯ , ಹೆಚ್ ಆರ್ ಡಿ ಸಚಿವಾಲಯ ಆದೇಶ

ಕೆಲ ವಿಶ್ವವಿದ್ಯಾಲಯಗಳಲ್ಲಿ ಘಟಿಕೋತ್ಸವ ಕಾರ್ಯಕ್ರಮ ಸ್ಥಗಿತಗೊಂಡಿರುವುದನ್ನು ಮನಗಂಡ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ , ಎಲ್ಲಾ ವಿಶ್ವವಿದ್ಯಾಲಯಗಳು ಪ್ರತಿವರ್ಷ ಕಡ್ಡಾಯವಾಗಿ ಘಟಿಕೋತ್ಸವ ಕಾರ್ಯಕ್ರಮ ಆಯೋಜಿಸುವಂತೆ ಪತ್ರ ಬರೆದಿದೆ.

ನವದೆಹಲಿ: ಕೆಲ ವಿಶ್ವವಿದ್ಯಾಲಯಗಳಲ್ಲಿ  ಘಟಿಕೋತ್ಸವ ಕಾರ್ಯಕ್ರಮ ಸ್ಥಗಿತಗೊಂಡಿರುವುದನ್ನು ಮನಗಂಡ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ , ಎಲ್ಲಾ ವಿಶ್ವವಿದ್ಯಾಲಯಗಳು ಪ್ರತಿವರ್ಷ ಕಡ್ಡಾಯವಾಗಿ ಘಟಿಕೋತ್ಸವ ಕಾರ್ಯಕ್ರಮ ಆಯೋಜಿಸುವಂತೆ  ಪತ್ರ ಬರೆದಿದೆ.

ವಾರ್ಷಿಕ ಪದವಿ ಪುರಸ್ಕಾರ ಕಾರ್ಯಕ್ರಮ ಪದವಿ ವಿದ್ಯಾರ್ಥಿಗಳಿಗೆ ಮಹತ್ವದಾಗಿರುವಂತೆ  ತಮ್ಮ ಮಕ್ಕಳ ಬಗ್ಗೆ ಪೋಷಕರು ಹೆಮ್ಮೆಪಡುವಂತಹ ಸಂದರ್ಭವಾಗಿದೆ. ಆದ್ದರಿಂದ ಪ್ರತಿವರ್ಷವೂ ಘಟಿಕೋತ್ಸವ ಸಮಾರಂಭವನ್ನು ಕಡ್ಡಾಯವಾಗಿ ಏರ್ಪಡಿಸಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ  ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹಣಕಾಸು ಅಥವಾ ಸಮಯದ ಅಭಾವದಿಂದಾಗಿ ಕೆಲ ವಿಶ್ವವಿದ್ಯಾಲಯಗಳನ್ನು ಪ್ರತಿವರ್ಷ ಘಟಿಕೋತ್ಸವ ಆಯೋಜಿಸದಿರುವುದು ಕಂಡುಬಂದಿದೆ. ಆದಾಗ್ಯೂ, ಅವರು ಕೂಡಾ ಪ್ರತಿವರ್ಷ ಈ ಕಾರ್ಯಕ್ರಮ ಆಯೋಜಿಸುವಂತೆ  ಅಧಿಕಾರಿಗಳು ಹೇಳಿದ್ದಾರೆ.

 ಕಳೆದ ವರ್ಷದ ಘಟಿಕೋತ್ಸವ ಕಾರ್ಯಕ್ರಮದ ಮಾಹಿತಿಯನ್ನು ರವಾನಿಸುವಂತೆ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸಚಿವಾಲಯ ತಿಳಿಸಿದೆ.  ಇದೇ ಉದ್ದೇಶದೊಂದಿಗೆ ಪಶ್ಚಿಮ ಬಂಗಾಳದ ವಿಶ್ವ ಭಾರತಿ ವಿವಿಯ ಘಟಿಕೋತ್ಸವನ್ನು ಐದು ವರ್ಷಗಳ ನಂತರ ಆಯೋಜಿಸಲಾಗಿತ್ತು.

ತ್ರಿಪುರಾದ ಕೇಂದ್ರೀಯ ವಿವಿ ಘಟಿಕೋತ್ಸವವನ್ನು ನಾಲ್ಕು ವರ್ಷಗಳ ನಂತರ ಈ ಬಾರಿ ಆಯೋಜಿಸಲಾಗಿತ್ತು.  46 ವರ್ಷದ ಬಳಿಕ ಜವಹರ್ ಲಾಲ್ ನೆಹರೂ ವಿವಿಯ ಎರಡನೇ ಘಟಿಕೋತ್ಸವವನ್ನು ಆಯೋಜಿಸಲಾಗಿತ್ತು.



   

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ