ಮೊರಾದಬಾದ್(ಉತ್ತರಪ್ರದೇಶ): ಈದ್ ಸಂಭ್ರಮಾಚರಣೆ ವೇಳೆ ಮುಸ್ಲಿಂ ಯುವಕರಿಗೆ ಯುವತಿಯೊರ್ವಳು ಆಲಿಂಗಿಸಿಕೊಂಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶದ ಮೊರಾದಬಾದ್ ನ ಮಾಲ್ ಒಂದರ ಮುಂದೆ ಯುವತಿಯೊರ್ವಳು ಸಾಲಾಗಿ ನಿಂತಿದ್ದ ಯುವರನ್ನು ಆಲಿಂಗಿಸಿಕೊಂಡು ಈದ್ ಶುಭಾಶಯ ತಿಳಿಸಿದ್ದಾರೆ. 2 ನಿಮಿಷಗಳ ಈ ವಿಡಿಯೋದಲ್ಲಿ ಮುಸ್ಲಿಂ ಯುವಕರು ಯುವತಿಯ ನ್ನು ಆಲಿಂಗಿಸಿಕೊಳ್ಳುವ ಸಲುವಾಗಿ ಸಾಲಾಗಿ ನಿಂತಿದ್ದು ಇದನ್ನು ಕೆಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.
ವಿಡಿಯೋ ದಲ್ಲಿ ಆ ಯುವತಿ ಯುವಕರನ್ನು ಆಲಿಂಗಿಸಿಕೊಂಡು ಈದ್ ಶುಭಾಶಯ ತಿಳಿಸುತ್ತಿದ್ದರೆ ಜತೆಯಲ್ಲೇ ಇದ್ದ ಮತ್ತೋರ್ವ ಯುವತಿ ಯುವಕರ ಸಂಖ್ಯೆಯನ್ನು ಲೆಕ್ಕಾ ಹಾಕುತ್ತಾ ನಿಂತಿದ್ದಾಳೆ.