ಮೈತ್ರಿ ತೊರೆಯಲು ಬಿಜೆಪಿ ನೀಡಿರುವ ಕಾರಣಗಳ ಬಗ್ಗೆ ಹೆಮ್ಮೆಇದೆ: ಪಿಡಿಪಿ
ಶ್ರೀನಗರ: ಕಾಶ್ಮೀರ ಜನತೆಯ ಹಿತಾಸಕ್ತಿಗಳನ್ನು ಕಾಪಾಡಲು ಸಾವಿರ ಬಾರಿ ಸರ್ಕಾರ, ಅಧಿಕಾರ ತ್ಯಾಗ ಮಾಡುವುದಕ್ಕೂ ಸಿದ್ಧವಿರುವುದಾಗಿ ಪಿಡಿಪಿ ಪಕ್ಷ ಹೇಳಿದೆ.
ಜಮ್ಮು-ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸರ್ಕಾರ ಪತನವಾಗಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಡಿಪಿ ಮುಖಂಡ ಎಂಎಲ್ ಸಿ ಮೊಹಮ್ಮದ್ ಖುರ್ಷಿದ್ ಆಲಂ, ಬಿಜೆಪಿ ಪಿಡಿಪಿಯೊಂದಿಗಿನ ಮೈತ್ರಿ ಮುರಿದುಕೊಳ್ಳುವುದಕ್ಕೆ ಯಾವೆಲ್ಲಾ ಕಾರಣಗಳನ್ನು ನೀಡಿದೆಯೋ ಅವೆಲ್ಲಾ ಕಾರಣಗಳ ಬಗ್ಗೆ ಪಿಡಿಪಿ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದೆ.
ಪಾಕಿಸ್ತಾನ ಹಾಗೂ ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸುವುದು, ಸೇನೆ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯುವುದು, ಏಕಪಕ್ಷೀಯವಾಗಿ ಕದನವಿರಾಮ ಹಾಕುವುದು ಪಿಡಿಪಿಯ ಬೇಡಿಕೆಗಳಾಗಿದ್ದವು. ಈ ಬೇಡಿಕೆಗಳ ಬಗ್ಗೆ ಪಿಡಿಪಿಗೆ ಹೆಮ್ಮೆ ಇದೆ, ಬಿಜೆಪಿ ಮೈತ್ರಿ ತೊರೆಯಲು ನೀಡಿರುವ ಕಾರಣವೂ ಸಹ ಇದೇ ಬೇಡಿಕೆಗಳಾಗಿದೆ. ಆದರೆ ಕಾಶ್ಮೀರದ ಜನತೆಯ ಹಿತಾಸಕ್ತಿಯನ್ನು ಕಾಪಾಡಲು ಎಷ್ಟು ಬಾರಿ ಬೇಕಾದರೂ ಅಧಿಕಾರ ತ್ಯಾಗ ಮಾಡುವುದಕ್ಕೆ ನಾವು ಸಿದ್ಧವಿದ್ದೇವೆ ಎಂದು ಪಿಡಿಪಿ ಹೇಳಿದೆ.
ಯಾವುದೇ ರೀತಿಯ ಸವಾಲು ಎದುರಾದರೂ ನಮ್ಮ ಸಿದ್ಧಂತದಲ್ಲಿ ಮಾತ್ರ ರಾಜಿಮಾಡಿಕೊಳ್ಳುವುದಿಲ್ಲ ಎಂದು ಪಿಡಿಪಿ ನಾಯಕ ಮೊಹಮ್ಮದ್ ಖುರ್ಷಿದ್ ಆಲಂ ಹೇಳಿದ್ದಾರೆ.