ಅಹಮದಾಬಾದ್; ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರಿಗೆ ಜೀವ ಬೆದರಿಕೆಯ ಇಮೇಲ್ ಬಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 15 ವರ್ಷಗಳ ಬಳಿಕ ಗುಜರಾತ್ ನ್ಯಾಯಾಲಯ ವಿಚಾರಣೆಯನ್ನು ಆರಂಭಿಸಿದೆ.
ಮೋದಿಗೆ ಜೀವ ಬೆದರಿಕೆ ಇಮೇಲ್ ಕಳುಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಹಮದಾಬಾದ್ ನಿವಾಸಿಯಾಗಿರುವ ಮೊಹಮ್ಮದ್ ರಿಜ್ವಾನ್ ಖಾದ್ರಿ ಎಂಬಾತ ಆರೋಪಿಯಾಗಿದ್ದಾನೆ.
ಕಳೆದ ವಾರ ಪ್ರಕರಣ ಸಂಬಂಧ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಜೆ.ಎಲ್ ಪರ್ಮಾರ್ ಅವರು ವಿಚಾರಣೆ ನಡೆಸಿದ್ದರು. ಮುಂದಿನ ವಾರ ಜೂನ್.27ರಂದು ಮುಂದಿನ ವಿಚಾರಣೆ ನಡೆಯಲಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರತೀಕ್ ಭಟ್ ಅವರು ಹೇಳಿದ್ದಾರೆ.
ಗುಜರಾತ್ ರಾಜ್ಯ ಉಗ್ರ ನಿಗ್ರಹ ಪಡೆಯ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ, 2002ರ ಡಿಸೆಂಬರ್ ತಿಂಗಳಿನಲ್ಲಿ ಖಾದ್ರಿ ಮೋದಿಯವರಿದೆ ಜೀವ ಬೆದರಿಕೆಯ ಇಮೇಲ್ ಕಳುಹಿಸಿದ್ದನೆಂದು ತಿಳಿಸಿದ್ದಾರೆ.
2003ರ ಫೆಬ್ರವರಿ ತಿಂಗಳೊಳಗಾಗಿ ನಿಮ್ಮನ್ನು ಹಾಗೂ ನಿಮ್ಮ ಬೆಂಬಲಿಗರಾದ ವಿಹೆಚ್, ಬಜರಂಗ ದಳ ಹಾಗೂ ಆರ್'ಎಸ್ಎಸ್ ಮುಖಂಡರನ್ನು ನಾಶ ಮಾಡುತ್ತೇನೆ. ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ, ವಿಹೆಚ್'ಪಿ ನಾಯಕ ಪ್ರವೀಣ್ ತೊಗಾಡಿಾಯ ಹಾಗೂ ಅಶೋಕ್ ಸಿಂಘಲ್ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಪ್ರಕರಣ ಸಂಬಂಧ 2003ರ ಫೆಬ್ರವರಿ 25 ರಂದು ಐಪಿಸಿ ಸೆಕ್ಷನ್ 507, 67ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಇದರಂತೆ ಆರೋಪಿ ಖಾದ್ರಿಯನ್ನು ಬಂಧನಕ್ಕೊಳಪಡಿಸಿದ್ದರು.
ಬಂಧನದ ಬಳಿಕ ಖಾದ್ರಿ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಕೈಬಿಡುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದ. ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಬಳಿಕ ಆರೋಪಿ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದ.