ಲಾಲು ಪ್ರಸಾದ್ ಯಾದವ್ 
ದೇಶ

ಲಾಲು ಪ್ರಸಾದ್ ಯಾದವ್ ಗೆ ಜು.3ರವರೆಗೂ ತಾತ್ಕಾಲಿಕ ಜಾಮೀನು ಅವಧಿ ವಿಸ್ತರಣೆ

ಆರ್ ಜೆಡಿ ವರಿಷ್ಠ, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ತಾತ್ಕಾಲಿಕ ಜಾಮೀನು ಅವಧಿಯನ್ನು ಜುಲೈ 3ರವರೆಗೂ ರಾಂಚಿ ಹೈಕೋರ್ಟ್ ವಿಸ್ತರಿಸಿದೆ.

ರಾಂಚಿ: ಆರ್ ಜೆಡಿ ವರಿಷ್ಠ, ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಜಾಮೀನು ಅವಧಿಯನ್ನು ಜುಲೈ 3ರವರೆಗೂ ತಾತ್ಕಾಲಿಕವಾಗಿ ವಿಸ್ತರಿಸಿ ರಾಂಚಿ ಹೈಕೋರ್ಟ್  ವಿಸ್ತರಿಸಿದೆ.

ಮೇವು ಹಗರಣಕ್ಕೆ ಸಂಬಂಧಿಸಿದಂತೆ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ 69 ವರ್ಷದ ಲಾಲು ಪ್ರಸಾದ್ ಯಾದವ್ ಹಾಗೂ ಇತರ 18 ಆರೋಪಿಗಳನ್ನು  ನ್ಯಾಯಾಲಯ ಜೈಲಿಗೆ ಅಟ್ಟಿತ್ತು.

ಪುತ್ರ ತೇಜ್ ಪ್ರತಾಪ್ ಯಾದವ್ ಮದುವೆಯಲ್ಲಿ ಭಾಗವಹಿಸುವುದಕ್ಕಾಗಿ ಮೇ ತಿಂಗಳಲ್ಲಿ  ಮೂರು ದಿನಗಳ  ಪೆರೋಲ್ ಪಡೆದಿದ್ದ ಲಾಲು ಪ್ರಸಾದ್ ಯಾದವ್ , ಅನಾರೋಗ್ಯದ ಹಿನ್ನೆಲೆಯಲ್ಲಿ ಆರು ವಾರಗಳ  ತಾತ್ಕಾಲಿಕ ಜಾಮೀನು ಪಡೆದಿದ್ದರು.

ಆದರೆ, ಜಾಮೀನು ಅವಧಿ ಮುಗಿದಿದ್ದರಿಂದ  ಅನಾರೋಗ್ಯ  ಹಿನ್ನೆಲೆಯಲ್ಲಿ  ಮತ್ತೆ ಜಾಮೀನು ಅವಧಿಯನ್ನು ವಿಸ್ತರಿಸಬೇಕೆಂದು ಲಾಲು ಪ್ರಸಾದ್ ಯಾದವ್  ಪರ ನ್ಯಾಯಾಧೀಶರು ಕೋರ್ಟಿಗೆ ಮನವಿ ಮಾಡಿಕೊಂಡಿದ್ದರು.

ರಕ್ತದೊತ್ತಡ,  ಹೃದಯ, ಮೂತ್ರಪಿಂಡ ಮತ್ತು ಖಿನ್ನತೆ ಸೇರಿದಂತೆ ಅನೇಕ ಗಂಭೀರ ರೋಗಗಳಿಗೆ ಹೋರಾಡುತ್ತಿದ್ದಾರೆ. ಅವರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಒದಗಿಸಲು ಜಾಮೀನು ಅವಧಿಯನ್ನು ವಿಸ್ತರಿಸಬೇಕೆಂದು ಸುಪ್ರೀಂಕೋರ್ಟ್ ಹಿರಿಯ ವಕೀಲ  ಅಭಿಷೇಕ್ ಮನು ಸಿಂಘ್ವಿ ಲಾಲು ಪ್ರಸಾದ್ ಯಾದವ್ ಪರ  ವಾದ ಮಂಡಿಸಿದರು.

ವಾದ, ಪ್ರತಿವಾದ ಆಲಿಸಿದ ನ್ಯಾಯಾಲಯ ಲಾಲೂ ಪ್ರಸಾದ್ ಯಾದವ್ ಅವರಿಗೆ ಜಾಮೀನು ಅವಧಿ ವಿಸ್ತರಿಸಿ ತೀರ್ಪು ತೀರ್ಪು ಪ್ರಕಟಿಸಿತು.



Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ