ರಾಂಚಿ: ದುಷ್ಕರ್ಮಿಗಳ ತಂಡವೊಂದು ಸಾಮಾಜಿಕ ಕಾರ್ಯಕರ್ತೆಯರನ್ನು ಗನ್ ನಿಂದ ಬೆದರಿಸಿ ಅಪಹರಣ ಮಾಡಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಜಾರ್ಖಂಡ್ ನ ಕುಂಟಿ ಜಿಲ್ಲೆಯ ಕೊಚಂಗ್ ಬ್ಲಾಕ್‌ನಲ್ಲಿ ಈ ಘಟನ ನಡೆದಿದ್ದು, ಕುಂಟಿ ಜಿಲ್ಲೆಯಲ್ಲಿ ಕಳ್ಳಸಾಗಣೆ ವಿರೋಧಿ ಜಾಗೃತಿ ಅಭಿಯಾನ ಕೈಗೊಂಡಿದ್ದ ಐವರು ಮಹಿಳೆಯರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ಕುಂಟಿ ಜಿಲ್ಲೆಯ ಕೊಚಂಗ್ ಬ್ಲಾಕ್‌ನಲ್ಲಿ ಮಾನವ ಕಳ್ಳಸಾಗಣೆ ವಿರೋಧಿಸಿ ಮಹಿಳೆಯರು ಬೀದಿ ನಾಟಕ ನಡೆಸುತ್ತಿದ್ದ ಸ್ಥಳಕ್ಕೆ ಬೈಕ್ ನಲ್ಲಿ ಬಂದ ಶಸ್ತ್ರ ಸಜ್ಜಿತ ದುಷ್ಕರ್ಮಿಗಳ ತಂಡ ಮಹಿಳೆಯರನ್ನು ಅಪಹರಿಸಿದೆ. ಕಾರಿನಲ್ಲಿ ಹತ್ತಿ ಕುಳಿತುಕೊಳ್ಳುವಂತೆ ಗನ್ ತೋರಿಸಿ ಕಾರು ಹತ್ತಿಸಿಕೊಂಡಿದ್ದಾರೆ. ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅದಾದ ಮೂರು ಗಂಟೆಗಳ ನಂತರ ಮಹಿಳೆಯರನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ ಅತ್ಯಾಚಾರದ ದೃಶ್ಯಾವಳಿಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ವಿಷಯ ಬಹಿರಂಗಗೊಳಿಸಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಪ್ರಸ್ತುತ ಮಹಿಳೆಯರು ಪೊಲೀಸ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 9 ಮಂದಿ ಶಂಕಿತರನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ತನಿಖೆ ಮುಂದುವರೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics