ಹೈದರಾಬಾದ್: ತಿರುಪತಿ ತಿರುಮಲ ದೇವಾಸ್ಥಾನದ ನಾಪತ್ತೆಯಾಗಿರುವ ಆಭರಣಗಳು ಮಧ್ಯ ಪ್ರಾಚ್ಯದಲ್ಲಿವೆ ಎಂದು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಆರೋಪಿಸಿದ್ದಾರೆ.
ಆಭರಣ ನಾಪತ್ತೆಯಾಗಿರುವ ಬಗ್ಗೆ ಆಂಧ್ರ ಪ್ರದೇಶ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡದೇ ಇರುವ ಬಗ್ಗೆ ಅಪಹಾಸ್ಯ ಮಾಡಿದ್ದಾರೆ, ಈ ಸಂಬಂಧ ಟ್ವೀಟ್ ಮಾಡಿರುವ ಪವನ್ ಕಲ್ಯಾಣ್, ಕೆಲವು ವರ್ಷಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿಯನ್ನು ಭೇಟಿ ಮಾಡಿದ್ದೆ, ಆಗ ಅವರು ಟಿಟಿಡಿಯಲ್ಲಿ ನಾಪತ್ತೆಯಾಗಿರುವ ಅಭರಣಗಳ ಬಗ್ಗೆ ಮಾಹಿತಿ ನೀಡಿದ್ದರು. ಈ ಆಭರಣ ನಾಪತ್ತೆ ಬಗ್ಗೆ ವಿರೋಧ ಪಕ್ಷದ ನಾಯಕರಿಗೂ ಅರಿವು ಇದೆ ಎಂದು ಪವನ್ ಕಲ್ಯಾಣ್ ಬರೆದಿದ್ದಾರೆ.
ನಮ್ಮ ದೇಶದಿಂದ ಮಧ್ಯ ಪ್ರಾಚ್ಯಕ್ಕೆ ಖಾಸಗಿ ವಿಮಾನದಲ್ಲಿ ಆಭರಣ ರವಾನೆಯಾಗಿದೆ. ಟಿಟಿಡಿಯ ಪ್ರಧಾನ ಅರ್ಚಕರ ಕಳವಳ ನನಗೆ ಅಚ್ಚರಿ ತರಿಸಿಲ್ಲ, ಬಾಲಾಜಿ ಅವರು ಮೂಕರಾಗಿದ್ದಾರೆ ಎಂದು ದರೋಡೆಕೋರರು ತಿಳಿದುಕೊಂಡಿದ್ದಾರೆ. ಗುಲಾಬಿ ಬಣ್ಣದ ವಜ್ರ ಹಾಗೂ ಮತ್ತಿತರರ ಆಭರಣಗಳು ನಾಪತ್ತೆಯಾಗಿದೆ ಎಂದು ಮಾಜಿ ಅರ್ಚಕ ಎ,ವಿ ರಾಮಣ್ಣ ದೀಕ್ಷಿತ್ ಆರೋಪಿಸಿದ್ದಾರೆ, ಇದಕ್ಕೆಲ್ಲಾ ಆಂಧ್ರ ಪ್ರದೇಶ ಸರ್ಕಾರ ಹೊಣೆ ಎಂದು ಹೇಳಿದ್ದಾರೆ.