ದೇಶ

ಗುರುದ್ವಾರ ಪ್ರವೇಶಕ್ಕೆ ಭಾರತ ರಾಯಭಾರಿಗೆ ನಿರ್ಬಂಧ: ಪಾಕ್ ವಿರುದ್ಧ ಭಾರತ ತೀವ್ರ ಆಕ್ಷೇಪ

Manjula VN
ನವದೆಹಲಿ; ರಾವಲ್ಪಿಂಡಿಯಲ್ಲಿರುವ ಗುರುದ್ವಾರ ಪಂಜಾ ಸಾಹೀಬ್ ಪ್ರವೇಶಕ್ಕೆ ತೆರಳದಂತೆ ಭಾರತದ ಹೈ ಕಮಿಷನಲ್ ಅಜಯ್ ಬಿಸಾರಿಯಾಗೆ ನಿರ್ಬಂಧ ಹೇರಿರುವ ಹಿನ್ನಲೆಯಲ್ಲಿ ಭಾರತ ಭಾನುವಾರ ಪ್ರತಿಭಟನೆ ವ್ಯಕ್ತಪಡಿಸಿದೆ.  
ಗುರುದ್ವಾರ ಪಂಜಾ ಸಾಹೀಬ್ ಪ್ರವೇಶಕ್ಕೆ ಪಾಕಿಸ್ದಾನ ವಿದೇಶಾಂಗ ಸಚಿವಾಲಯ ಪೂರ್ವಾನುಮತಿ ನೀಡಿದ್ದರೂ, ಭಾರತೀಯ ಯಾತ್ರಿಗಳನ್ನು ಅಂಜಯ್ ಬಿಸಾರಿಯಾ ಅವರು ಭೇಟಿ ಮಾಡಲು ಅನುಮತಿ ನಿರಾಕರಿಸಲಾಗಿದೆ. 
ಈ ಹಿನ್ನಲೆಯಲ್ಲಿ ಭಾರತದಲ್ಲಿರುವ ಪಾಕಿಸ್ತಾನದ ಡೆಪ್ಯುಟಿ ಹೈ ಕಮಿಷನರ್ ಸೈಯದ್ದ ಹೈದರ್ ಶಾ ಅವರನ್ನು ಕರೆಸಿಕೊಂಡ ವಿದೇಶಾಂಗ ವ್ಯವಹಾರಕಗಳ ಸಚಿವಾಲಯ ತೀವ್ರ ಪ್ರತಿಭಟನೆ ದಾಖಲಿಸಿದೆ. 
ಧಾರ್ಮಿಕ ಸ್ಥಳಕ್ಕೆ ತೆರಳಿ ಭಾರತೀಯ ಯಾತ್ರಿಕರನ್ನು ಭೇಟಿಯಾಗಲು ಅನುಮತಿ ನಿರಾಕರಿಸುವ ಮೂಲಕ ಪಾಕಿಸ್ತಾನ ರಾಜತಾಂತ್ರಿಕ ಸಂಬಂಧಗಳ ಕುರಿತ 1961ರ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಭಾರತ ಆರೋಪ ಮಾಡಿದೆ. 
ಪಾಕಿಸ್ತಾನದ ಈ ನಡೆಗೆ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್'ಜಿಸಿಸಿ) ಸೇರಿದಂತೆ ಭಾರತದ ಹಲವು ಸಂಘಟನೆಗಳು ತೀವ್ರವಾಗಿ ಖಂಡಿಸಿದೆ. 
ಯಾತ್ರಿಕರನ್ನು ಭೇಟಿಯಾಗಲು ಭಾರತದ ರಾಯಭಾರಿಗಳಿಗೆ ಪಾಕಿಸ್ತಾನ ಸರ್ಕಾರ ಅನುಮತಿ ನಿರಾಕರಿಸುತ್ತಿರುವುದು ಮೂರು ತಿಂಗಳಲ್ಲಿ ಇದು ಎರಡನೇ ಬಾರಿ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 
SCROLL FOR NEXT