ಸಾಂದರ್ಭಿಕ ಚಿತ್ರ 
ದೇಶ

ಕತ್ತು ಸೀಳಿ ಭಾರತೀಯ ಸೇನೆಯ ಮೇಜರ್​ ಅಮಿತ್​ ದ್ವಿವೇದಿ ಪತ್ನಿಯ ಭೀಕರ ಕೊಲೆ

ಭಾರತೀಯ ಸೇನೆ ಮೇಜರ್​ ಅಮಿತ್​ ದ್ವಿವೇದಿ ಪತ್ನಿ ಶೈಲಜಾ ಅವರನ್ನು ದೆಹಲಿಯಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದ್ದು, ಅವರ ಕತ್ತು ಸೀಳಿ, ದೇಹದ ಮೇಲೆ ಹಲವು ಬಾರಿ ಕಾರು ಚಲಾಯಿಸಲಾಗಿದೆ.

ನವದೆಹಲಿ: ಭಾರತೀಯ ಸೇನೆ ಮೇಜರ್​ ಅಮಿತ್​ ದ್ವಿವೇದಿ ಪತ್ನಿ ಶೈಲಜಾ ಅವರನ್ನು ದೆಹಲಿಯಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದ್ದು, ಅವರ ಕತ್ತು ಸೀಳಿ, ದೇಹದ ಮೇಲೆ ಹಲವು ಬಾರಿ ಕಾರು ಚಲಾಯಿಸಲಾಗಿದೆ.
ದೆಹಲಿಯ ಮೆಟ್ರೋ ನಿಲ್ದಾಣದ ಬಳಿ ಶೈಲಜಾ ಅವರ ಮೃತದೇಹ ಪತ್ತೆಯಾಗಿದ್ದು, ಈ ಬಗ್ಗೆ ದಾರಿ ಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಘಟನಾ ಸ್ಥಳಕ್ಕೆ ದೌಡಾಯಿಸಿರುವ ಪೊಲಿೀಸರು ಶವಪತ್ತೆಯಾದ ಸ್ಥಳದ ಮಹಜರು ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರು ಈ ಪ್ರಕರಣದ ಪ್ರಾಥಮಿಕ ತನಿಖೆಯ ನಂತರ ಇನ್ನೊಬ್ಬ ಮೇಜರ್​ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಅವರು ಶೈಲಜಾ ಹಾಗೂ ಆಕೆಯ ಪತಿಗೆ ಇಬ್ಬರಿಗೂ ಸ್ನೇಹಿತರಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಈ ಸಂಬಂಧ ಅವರನ್ನು ಸಂಪರ್ಕಿಸಲು ಪೊಲೀಸರು ಯತ್ನಿಸಿದ್ದು, ಈಗ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಅಲ್ಲದೆ ಫೋನ್​ ಕೂಡ ಸ್ವಿಚ್​ ಆಫ್​ ಬರುತ್ತಿದೆ. ಹೀಗಾಗಿ ಪೊಲೀಸರು ಅವರ ಮೇಲೆಯೇ ಬಲವಾದ ಅನುಮಾನ ವ್ಯಕ್ತಪಡಿಸಿದ್ದಾರೆ. 
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್​ ಜಂಟಿ ಕಮಿಷನರ್​ ಮಧುಪ್​ ತಿವಾರಿ, 'ಶೈಲಜಾ ಕೊಲೆ ಪ್ರಕರಣ ಮೊದಲು ನೋಡಿದರೆ ಅದೊಂದು ಅಪಘಾತವೆಂದೆನಿಸುತ್ತದೆ. ಆದರೆ ಪ್ರಾಥಮಿಕ ತನಿಖೆಯಿಂದ ಇದು ಕೊಲೆಯೆಂಬುದು ಸಾಬೀತಾಗಿದೆ ಎಂದಿದ್ದಾರೆ.
ಮೂಲಗಳ ಪ್ರಕಾರ ಶೈಲಜಾ ಅವರು ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಆರ್ಮಿ ವಾಹನದಲ್ಲಿ ದೆಹಲಿ ಬೇಸ್​ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿ ಸೆಶನ್​ಗೆಂದು ತೆರಳಿದ್ದರು. ಅದು ಮುಗಿದ ಬಳಿಕ ಡ್ರೈವರ್​ ಆಕೆಯನ್ನು ಕರೆತರಲು ಹೋದಾಗ ಶೈಲಜಾ ಸೆಶನ್​ನಲ್ಲಿ ಪಾಲ್ಗೊಂಡಿಲ್ಲ ಎಂಬ ಮಾಹಿತಿ ತಿಳಿದಿದೆ. ಆಕೆ ಆಸ್ಪತ್ರೆಯಲ್ಲಿ ಇಲ್ಲವೆಂದು ತಿಳಿದ ಬಳಿಕ ವಾಪಸ್​ ಪರೇಡ್​ ಮೈದಾನಕ್ಕೆ ಹೋಗಿ ಅಮಿತ್​ ದ್ವಿವೇದಿಗೆ ಮಾಹಿತಿ ನೀಡಿದ್ದಾರೆ. ಆಗ ಅಮಿತ್​ ಅವರು ಪತ್ನಿಯನ್ನು ಹುಡುಕಲು ಪ್ರಾರಂಭಿಸಿದ್ದು, ಮೆಟ್ರೋ ಸ್ಟೇಶನ್​ ಬಳಿ ದಾರಿಹೋಕರೊಬ್ಬರು ಮಹಿಳೆಯ ಶವವಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
ಅದಾದ ಬಳಿಕ ಮಧ್ಯಾಹ್ನ 4.30ಕ್ಕೆ ನಾರೈನ ಪೊಲೀಸ್​ ಠಾಣೆಯಲ್ಲಿ ಅಮಿತ್​ ತಿವಾರಿ ಪತ್ನಿ ಕಾಣೆಯಾದ ಬಗ್ಗೆ ದೂರು ನೀಡಲು ಹೋದಾಗ ಅನುಮಾನಗೊಂಡ ಪೊಲೀಸರು ಮೃತಪಟ್ಟ ಮಹಿಳೆಯನ್ನು ತೋರಿಸಿದ್ದಾರೆ. ಶೈಲಜಾ ಆಸ್ಪತ್ರೆಗೆಂದು ಹೋದರೂ ಅಲ್ಲಿಗೆ ಹೋಗಿಲ್ಲ. ಅಲ್ಲಿಂದ ಇನ್ಯಾರೋ ಪರಿಚಯದವರೇ ಬೇರೆ ವಾಹನದಲ್ಲಿ ಆಕೆಯನ್ನು ಕರೆದೊಯ್ದು ಕೊಲೆ ಮಾಡಿದ್ದಾರೆ. ನಂತರ ಆಕ್ಸಿಡೆಂಟ್​ ಎಂದು ತೋರಲು ಕಾರಿನಿಂದ ಡಿಕ್ಕಿ ಹೊಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!