ಬಿಜೆಪಿ ಮುಖಂಡ ಶಾಸಕ ಚೌಧರಿ ಲಾಲ್ ಸಿಂಗ್
ಕಥುವಾ: ಪತ್ರಕರ್ತರೇ ಎಚ್ಚರ.. ವರದಿ ಶೈಲಿ ಬದಲಾಗದಿದ್ದರೆ ಶುಜಾತ್ ಬುಖಾರಿಗಾದ ಗತಿಯೇ ನಿಮಗೂ ಬರುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಶಾಸಕ ಚೌಧರಿ ಲಾಲ್ ಸಿಂಗ್ ಪತ್ರಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ.
ಜಮ್ಮುವಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಚೌಧರಿ ಲಾಲ್ ಮಾತನಾಡಿದ ಸಿಂಗ್, ಕಥುವಾ ಅತ್ಯಾಚಾರ ಪ್ರಕರಣದ ವರದಿಯ ದಾಟಿಯನ್ನು ಬದಲಿಸಿಕೊಳ್ಳದಿದ್ದರೆ ಇತ್ತೀಚೆಗೆ ಹತ್ಯೆಯಾದ ಪತ್ರಕರ್ತ ಶುಜಾತ್ ಬುಖಾರಿ ಗತಿಯೇ ನಿಮಗೂ ಬರುತ್ತದೆ. ನೀವು ಬದಕುವ ಮತ್ತು ಬರೆಯುವ ನಡುವೆ ಸ್ಪಷ್ಟವಾದ ಗೆರೆ ಎಳೆದುಕೊಳ್ಳಿ. ಬರವಣಿಗೆಯ ಶೈಲಿ ಬದಲಿಸಿಕೊಳ್ಳಿ. ಇಲ್ಲದಿದ್ದರೆ ಬದುಕು ದುರ್ಬರವಾಗುತ್ತದೆ. ಶುಜಾತ್ ಬುಖಾರಿ ಸ್ಥಿತಿ ತಂದುಕೊಳ್ಳಬೇಡಿ ಎಂದು ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದಾನೆ.
ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ಎಂಟು ವರ್ಷದ ಮುಸ್ಲಿಂ ಕುರಿಗಾಹಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಅಮಾನುಷವಾಗಿ ಹತ್ಯೆ ಮಾಡಲಾಗಿತ್ತು. ಕಥುವಾ ಅತ್ಯಾಚಾರ ಪ್ರಕರಣದ ಆರೋಪಿಗಳ ಪರ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಪಿಡಿಪಿ–ಬಿಜೆಪಿ ಸರ್ಕಾರದ ಅರಣ್ಯ ಸಚಿವರಾಗಿದ್ದ ಚೌಧರಿ ಲಾಲ್ ಸಿಂಗ್ ಅವರನ್ನುಇತ್ತೀಚೆಗಷ್ಟೇ ಸಂಪುಟದಿಂದ ಕೈಬಿಡಲಾಗಿತ್ತು.
ಈ ಹಿಂದೆ ಇದೇ ಚೌಧರಿ ಲಾಲ್ ಸಿಂಗ್, ದೇಶ ವಿಭಜನೆಯ ಸಂದರ್ಭದಲ್ಲಿ ಕಾಶ್ಮೀರದಲ್ಲಿ ನಡೆದ ಮುಸ್ಲಿಮರ ನರಮೇಧ ಮರುಕಳಿಸುತ್ತದೆ ಎಂದು ಕಾಶ್ಮೀರದ ಗುಜ್ಜರ್ ಸಮುದಾಯಕ್ಕೆ ಸೇರಿದ ಬೆದರಿಕೆ ಒಡ್ಡಿ ಸುದ್ದಿಯಾಗಿದ್ದರು.