ಜಮ್ಮು-ಕಾಶ್ಮೀರ: ಕಾಶ್ಮೀರದಲ್ಲಿ ಮತ್ತೋರ್ವ ಯೋಧನ ಶವ ತನ್ನ ನಿವಾಸದ ಬಳಿಯೇ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಮೃತ ಯೋಧ ರಜೆ ಪಡೆದು ಮನೆಗೆ ತೆರಳಿದ್ದರು. ರಜೆ ಮುಕ್ತಾಯಗೊಳಿಸಿ ಜೂ.30 ರಂದು ಪಂಜಾಬ್ ಫಿರೋಜ್ಪುರದಲ್ಲಿದ್ದ ಯುನಿಟ್ ನಲ್ಲಿ ವಾಪಸ್ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಯೋಧನ ಮನೆಯ ಬಳಿಯೇ ಆತನ ಶವ ಪತ್ತೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಈ ಸಂಬಂಧ ಎಫ್ಐಆರ್ ದಾಖಲಾಗಿದ್ದು, ಯೋಧನ ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ.