ಮೊಬೈಲ್ 
ದೇಶ

ಸ್ಮಾರ್ಟ್‌ಫೋನ್‌ಗಾಗಿ ತಂದೆಯನ್ನೇ ಕೊಂದ ಮಗ!

ಸ್ಮಾರ್ಟ್‌ಫೋನ್‌ ತೆಗೆದುಕೊಳ್ಳಲು ಹಣ ನೀಡಿಲ್ಲ ಅಂತ ಕೋಪಗೊಂಡ ತಂದೆಯನ್ನು ಹತ್ಯೆ ಮಾಡಿರುವ ದಾರುಣ ಘಟನೆ ನಡೆದಿದೆ...

ಕಾನ್ಪುರ: ಸ್ಮಾರ್ಟ್‌ಫೋನ್‌ ತೆಗೆದುಕೊಳ್ಳಲು ಹಣ ನೀಡಿಲ್ಲ ಅಂತ ಕೋಪಗೊಂಡ ತಂದೆಯನ್ನು ಹತ್ಯೆ ಮಾಡಿರುವ ದಾರುಣ ಘಟನೆ ನಡೆದಿದೆ. 
ಫತೇಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು 19 ವರ್ಷದ ಆನಂದ್ ಕಿಶೋಕ್ ತಿವಾರಿ ತನ್ನ ತಂದೆ 60 ವರ್ಷದ ಕೃಷ್ಣ ಕುಮಾರ್ ಎಂಬುವರನ್ನು ಗುದ್ದಲಿ ತೆಗೆದುಕೊಂಡು ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ತೀವ್ರ ರಕ್ತಸಾವ್ರವಾಗಿ ಕೃಷ್ಣ ಕುಮಾರ್ ಮೃತಪಟ್ಟಿದ್ದಾರೆ. 
ಘಟನೆ ವೇಳೆ ಕೃಷ್ಣ ಕುಮಾರ್ ಅವರು ಕಿರುಚಾಡಿದ್ದರಿಂದ ನೆರೆಹೊರೆಯವರು ಅಲ್ಲಿಗೆ ಬಂದು ತಪ್ಪಿಸಿಕೊಳ್ಳಲು ಮುಂದಾಗುತ್ತಿದ್ದ ಆನಂದ್ ನನ್ನ ಬಂಧಿಸಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. 
ಕೃಷ್ಣ ಕುಮಾರ್ ಅವರಿಗೆ ನಾಲ್ಕು ಜನ ಗಂಡು ಮಕ್ಕಳಿದ್ದು ಮೂರನೇ ಮಗ ಆನಂದ್ ತಂದೆಯನ್ನೇ ಹತ್ಯೆ ಮಾಡಿದ್ದಾನೆ. ಕೆಲಸ ಕಾರ್ಯವಿಲ್ಲದೆ ಬೇಕಾಬಿಟ್ಟಿ ತಿರುಗಾಡಿಕೊಂಡಿದ್ದ ಆನಂದ್ ದುಡ್ಡಿದಾಗಿ ಪದೇ ಪದೇ ತಂದೆಯನ್ನು ಪೀಡಿಸುತ್ತಿದ್ದ. ಕಳೆದ ಶನಿವಾರ ರಾತ್ರಿ ತಾನು ಸ್ಮಾರ್ಟ್ ಫೋನ್ ತೆಗೆದುಕೊಳ್ಳಬೇಕು ಹಣ ನೀಡುವಂತೆ ಒತ್ತಾಯ ಮಾಡಿದ್ದಾನೆ. ಈ ವೇಳೆ ಕೃಷ್ಣ ಕುಮಾರ್ ಹಣ ನೀಡಲು ನಿರಾಕರಿಸಿದ್ದರಿಂದ ಕೋಪಗೊಂಡು ಆನಂದ್ ತಂದೆಯನ್ನೇ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಜಲಪ್ರಳಯ ನಡುವೆ ಮಹಾ ಪವಾಡ; ಮೃತ್ಯುಕೂಪದಿಂದ ಹೊರಬಂದ ಕಾರ್ಮಿಕರು, ತ್ರಿಶೂಲಿ-3A ಸುರಂಗದಿಂದ ಇಬ್ಬರು ಜೀವಂತ ರಕ್ಷಣೆ..!

Climate compensation ವಿವಾದ; ಭಾರತದಿಂದ ನೆರವು ಸ್ವೀಕರಿಸಿದ್ದೇವೆ, ಯಾವುದೇ ಪರಿಹಾರಕ್ಕೂ ಬೇಡಿಕೆ ಇಟ್ಟಿಲ್ಲ; ನೇಪಾಳ ಸ್ಪಷ್ಟನೆ..!

ನೇಪಾಳ ಪ್ರವಾಹ ದುರಂತ: ನಾಪತ್ತೆಯಾದವರ ಕುಟುಂಬಕ್ಕೆ ಭಾರತ ನೆರವು, DNA ಪರೀಕ್ಷೆಗೆ ಕೇಂದ್ರದಿಂದ ವ್ಯವಸ್ಥೆ..!

ಇಸ್ರೋದ GSLV-F17 ರಾಕೆಟ್‌ ಉಡಾವಣೆ ಯಶಸ್ವಿ: ಮಳೆಯ ನಡುವೆಯೂ ನಭಕ್ಕೆ ಚಿಮ್ಮಿದ ಭಾರತದ ಮೊದಲ ಭೂವೀಕ್ಷಣಾ ಉಪಗ್ರಹ

ಮೈಸೂರು ದಸರಾಗೆ ದಕ್ಷಿಣ ಭಾರತದ ಎಲ್ಲಾ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ತೀರ್ಮಾನ: ಏರ್ ಶೋ ನಡೆಸಲು ಚಿಂತನೆ