ನವದೆಹಲಿ: ಹಿರಿಯ ಕಾಂಗ್ರೆಸ್ ಮುಖಂಡ ಸೈಪುದ್ದೀನ್ ಸೊಜ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಪಾಲ್ಗೊಳ್ಳುತ್ತಿಲ್ಲ ಎಂಬುದು ಮೂಲಗಳಿಂದ ತಿಳಿದುಬಂದಿದೆ.ಆದಾಗ್ಯೂ, ಕಾರಣ ಏನೆಂಬುದು ಸ್ಪಷ್ಟವಾಗಿ ಹೇಳಲು ಆಗುತ್ತಿಲ್ಲ.
ಸೈಪುದ್ದೀನ್ ಅವರ ಕಾಶ್ಮೀರ , ಗ್ಲೀಂಪಸ್ ಆಫ್ ಇಸ್ಟರಿ ಅಂಡ್ ದಿ ಸ್ಟೋರಿ ಆಫ್ ಸ್ಟ್ರಾಗಲ್ ಪುಸ್ತಕದಲ್ಲಿ ಕಾಶ್ಮೀರ ವಿಚಾರದಲ್ಲಿ ಮುಷರಪ್ ಅವರ ನಿಲುವು ಇಂದಿಗೂ ಸರಿಯಾಗಿ ಕಾಣುತ್ತಿದೆ ಎಂದು ಹೇಳಲಾಗಿದೆ.
ಕಾಶ್ಮೀರಿಗಳು ಪಾಕಿಸ್ತಾನದೊಂದಿಗೆ ಸೇರಬೇಡಿ, ಸ್ವತಂತ್ರಕ್ಕೆ ಮೊದಲ ಆದ್ಯತೆ ನೀಡಿ ಎಂದು ಮುಷರಪ್ ಹೇಳಿಕೆ ನೀಡಿದ್ದು, ಈಗಲೂ ಕೂಡಾ ಪ್ರಸ್ತುತದಿಂದ ಕೂಡಿದೆ. ಆದರೆ, ಅದು ಸಾಧ್ಯವಿಲ್ಲ ಎಂಬುದು ನನ್ನಗೆ ಗೊತ್ತು ಎಂದು ಸಂದರ್ಶನವೊಂದರಲ್ಲಿ ಸೈಪುದ್ದೀನ್ ಸೊಜ್ ಹೇಳಿಕೆ ನೀಡಿದ್ದರು.