ನಿವೃತ್ತಿಯ ಬಳಿಕ ವಿವಾದಾತ್ಮಕ ಹೇಳಿಕೆ ನಿರೀಕ್ಷಿಸಲಿಲ್ಲ: ಚಲಮೇಶ್ವರ್ ಹೇಳಿಕೆಗೆ ಬಾರ್ ಕೌನ್ಸಿಲ್ ತಿರುಗೇಟು
ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದವರು ಮಾದ್ಯಮಗಳೆದುರು ’ಅಪ್ರಸ್ತುತ’ ’ವಿವಾದಾತ್ಮಕ’ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಹೇಳಿದೆ. ನ್ಯಾಯಮೂರ್ತಿ ಚಲಮೇಶ್ವರ್ ತಾವು ನಿವೃತ್ತರಾದ ಮೂರು ದಿನಗಳ ನಂತರದಲ್ಲಿ ಮಾದ್ಯಮಗಳೆದು ನ್ಯಾಯಾಲಯ ವ್ಯವಸ್ಥೆ ಕುರಿತಂತೆ ’ಅಸಂಬದ್ದ’ ಹೇಳಿಕೆ ನಿಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕೇಂದ್ರ ಸರ್ಕಾರ ನ್ಯಾ.ಕೆ.ಎಂ. ಜೋಸೆಫ್ ಅವರ ಹೆಸರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಸೂಚಿಸುವ ಕ್ರಮವನ್ನು ’"ಸಮರ್ಥನೀಯವಾದ ಕ್ರಮವಲ್ಲ" ಎಂದು ಚ;ಅಮೇಶ್ವರ್ ವಾದಿಸಿದ್ದರು.
ಕಳೆದ ಜನವರಿಯಲ್ಲಿ ಮೂರು ಹಿರಿಯ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಚಲಮೇಶ್ವರ್ ಸಿಜೆಐ ವಿರುದ್ಧ ಆರೋಪ ಮಾಡಿದ್ದರು.
ಚಲಮೇಶ್ವರ್ ಹೇಳಿಕೆ ಸಂಬಂಧ ಮಾತನಾಡಿದ ಬಿ.ಸಿ.ಐ. ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ "ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಯಿಂದ ಇಂತಹಾ ಹೇಳಿಕೆಗಳನ್ನು ನಿರೀಕ್ಷಿಸಲಾಗುವುದಿಲ್ಲ" ಎಂದಿದ್ದಾರೆ.
"ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿದ್ದವರಿಗೆ ಸ್ವಯಂ ನಿಗ್ರಹವಿರಬೇಕು. ಅದು ಸದ್ಗುಣಿಗಳ ಲಕ್ಷಣ.. ಅವರು ಇದನ್ನು ಮರೆತಿದ್ದಾರೆಂದು ತೋರುತ್ತಿದೆ. ನಿವೃತ್ತಿಯಾದ ತಕ್ಷಣ ಮಾದ್ಯಮದೆದುರು ಇಂತಹಾ ’ಅಸಂಬದ್ದ’ ಹೇಳಿಕೆ ನಿಡುವುದು ಸಮರ್ಥನೀಯವಾಗಿಲ್ಲ. ಇವುಗಳ ಕುರಿತು ನಮಗೆ ಅಸಮ್ಮತಿ ಇದೆ.ಇಂತಹಾ ಹೇಳಿಕೆಕೆಗಳನ್ನು ದೇಶದ ಇತರ ವಕೀಲರು ಸಹ ಸಹಿಸಿಕೊಳ್ಳಲು ಆಗುವುದಿಲ್ಲ., ಜೀರ್ಣಿಸಿಕೊಳ್ಳಲಾಗುವುದಿಲ್ಲ" ಎಂದು ಬಿ.ಸಿ.ಐ ಹೇಳಿದೆ.
ಮಾದ್ಯಮಗಳೆದುರು ಮಾತನಾಡಿದ್ದ ನ್ಯಾಯಮೂರ್ತಿ ಚಲಮೇಶ್ವರ್ ಸುಪ್ರೀಂ ನ್ಯಾಯಮೂರ್ತಿಗಳ ನೇಮಕದಲ್ಲಿ ಫಿಕ್ಸಿಂಗ್ ನಡೆಸಲಾಗುತ್ತಿದೆ ಎಂಬರ್ಥದ ’ವಿವಾದಾತ್ಮಕ’ ಹೇಳಿಕೆಗಳನ್ನು ನೀಡಿದ್ದರು.ನ್ಯಾಯಾಲಯದ ಹುದ್ದೆಯಲ್ಲಿದ್ದಾಗಲೇ ಚಲಮೇಶ್ವರ್ ಈ ಸಂಬಂಧ ಆಕ್ಷೇಪ ಎತ್ತಬೇಕಾಗಿತ್ತು ಆದರೆ ನಿವೃತ್ತಿಯಾದ ಬಳಿಕ ಏಕೆ ಹೀಗೆ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಸಿಐ ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos