ದೇಶ

ಲೋಕಸಭೆ ಚುನಾವಣೆಗೆ ಮುನ್ನ 'ಮಹಾಮೈತ್ರಿ’ ಅಸಾಧ್ಯ: ಶರದ್ ಪವಾರ್

Raghavendra Adiga
ನವದೆಹಲಿ: 2019 ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯೇತರ ಪಕ್ಷಗಳ ಮಹಾಮೈತ್ರಿ ’ಮಹಾಘಟಬಂಧನ್’ ಪ್ರಾಯೋಗಿಕವಾಗಿ ಸಾಧ್ಯವಾಗದು ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ. ಈ ಮೂಲಕ ಅವರು ತಮ್ಮ ಹಿಂದಿನ ನಿರ್ಧಾರದಿಂದ  ದೂರ ಸರಿಯುವ ಸೂಚನೆ ಇತ್ತಿದ್ದಾರೆ.
"ಚುನಾವಣೆಗೆ ಮುನ್ನ ಮಹಾಮೈತ್ರಿ - ಮಹಾಘಟಬಂಧನ್ ಎನ್ನುವುದು ಪ್ರಾಯೋಗಿಕವಾಗಿ ಸಾಧ್ಯವಾಗುವುದಿಲ್ಲ ಎಂದು ಪವಾರ್ ಸಿಎನ್ಎನ್-ನ್ಯೂಸ್ 18 ಟಿವಿ ಚಾನಲ್ ಗೆ ನಿಡಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ.
"ಮಾದ್ಯಮಗಳಲ್ಲಿ ಈ ಸಂಬಂಧ ಅನೇಕ ರೀತಿಯ ಊಹಾಪೋಹಗಳು ಹರಿದಾಡುತ್ತಿದೆ, ಬಿಜೆಪಿ ಸರ್ಕಾರದ ಪರ್ಯಾಯದ ಬಗ್ಗೆ ಹಲವಾರು ರೀತಿಯ ಬರಹಗಳು, ಮಹಾಘಟಬಂಧನ್ ನಂತಹಾ ಮೈತ್ರಿಯ ಬಗ್ಗೆ ಹೇಳಿದೆ. ಆದರೆ ನನಗೆ ಅಂತಹಾ ಯಾವ ಸಾಧ್ಯತೆಗಳು ಕಾಣುತ್ತಿಲ್ಲ. ನನ್ನ ಕೆಲವು ಸ್ನೇಹಿತರು ಅದನ್ನು ಬಯಸುತ್ತಿದ್ದಾರೆ. ಆದರೆ ಅದಾವುದು ಸಹ ಪ್ರಾಯೋಗಿಕವಾಗಿ ಇಲ" ಶರದ್ ಪವಾರ್ ಹೇಳಿದರು.
ಚುನಾವಣೆಗಳ ನಂತರ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಪವಾರ್ "ನನ್ನ ಸ್ವಂತ ಆಲೋಚನೆ ಮತ್ತು ಮೌಲ್ಯಮಾಪನದ ಪ್ರಕಾರ ರಾಜ್ಯವಾರು ಫಲಿತಾಂಶಗಳು ಭಿನ್ನವಾಗಿರಲಿದೆ. ಬಿಜೆಪಿಯೇತರ ಪಕ್ಷಗಳು ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ"
"ನೀವು ರ್ನಾಟಕ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಪಂಜಾಬ್ ಗಳಲ್ಲಿ ಕಾಂಗ್ರೆಸ್ ನಂಬರ್ ಒನ್ ಪಕ್ಷವಾಗಿರುವುದನ್ನು ಕಾಣುತ್ತೀರಿ. ಆದರೆ ಆಂಧ್ರದಲ್ಲಿ ತೆಲುಗು ದೇಶಂ ನಂಬರ್ ಒನ್ ಸ್ಥಾನದಲ್ಲಿದೆ. ತೆಲಂಗಾಣದಲ್ಲಿ  ಕೆ ಚಂದ್ರಶೇಖರ ರಾವ್, ಒಡಿಶಾದಲ್ಲಿ ನವೀನ್ಪಟ್ನಾಯಕ್ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಪ್ರಮುಖ ಶಕ್ತಿಯಾಗಿದ್ದಾರೆ. ಅವರೆಲ್ಲಾ ತಮ್ಮ ತಮ್ಮ ರಾಜ್ಯಗಳಲ್ಲಿ ಒಬ್ಬ ನಾಯಕನಾಗಿ, ಆಯಾ ಪಕ್ಷ ಒಂದು ಶಕ್ತಿಯಾಗಿ ಗುರುತಿಸಿಕೊಂಡಿದೆ. ಆದರೆ ಇದು ಮಹಾಮೈತ್ರಿ ಎನಿಸಿಕೊಳ್ಳುವುದಿಲ್ಲ.
"ಚುನಾವಣೆ ನಂತರ ಈ ಎಲ್ಲಾ ನಾಯಕರು ಒಟ್ಟಾಗುವ ಸಾಧ್ಯತೆ ಇದೆ. ಬಿಜೆಪಿ ವಿರುದ್ಧವೇ ಚುನಾವಣೆ ನಡೆಯಲಿದೆ '' ಎಂದು ಪವಾರ್ ಹೇಳಿದರು
ಚುನಾವಣೆ ಮುಗಿದ ಬಳಿಕ ಬಿಜೆಪಿಯೇತರ ಪಕ್ಷದ ನಾಯಕರು ಒಟ್ಟಾಗುವ ಸಾಧ್ಯತೆಯನ್ನು ಒಪ್ಪಿಕೊಂಡಿರುವ ಪವಾರ್ ಚುನಾವಣೆಗೆ ಮುನ್ನ ಮಹಾಘಟಬಂಧನ್ ಅಥವಾ ಮಹಾಮೈತ್ರಿಯ ಕುರಿತಂತೆ ಯಾವ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.
SCROLL FOR NEXT