ಪ್ರಧಾನಿ ಮೋದಿ (ಸಂಗ್ರಹ ಚಿತ್ರ) 
ದೇಶ

'ಭಾರತದಲ್ಲಿ ತುರ್ತು ಪರಿಸ್ಥಿತಿ ಒಂದು ಕರಾಳ ಅವಧಿ': ಪ್ರಧಾನಿ ಮೋದಿ

ತುರ್ತು ಪರಿಸ್ಥಿತಿಯನ್ನು ಒಂದು ಕರಾಳ ಅವಧಿಯೆಂದು ಭಾರತ ಇಂದಿಗೂ ನೆನೆಯುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ...

ನವದೆಹಲಿ; ತುರ್ತು ಪರಿಸ್ಥಿತಿಯನ್ನು ಒಂದು ಕರಾಳ ಅವಧಿಯೆಂದು ಭಾರತ ಇಂದಿಗೂ ನೆನೆಯುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದ್ದಾರೆ. 
1975ರಲ್ಲಿ ಅಂದಿನ ಪ್ರಧಾನಮಂತ್ರಿಯಾಗಿದ್ದ ಇಂದಿರಾ ಗಾಂಧಿಯವರು ದೇಶದಲ್ಲಿ ಆಂತರಿಕ ತುರ್ತುಪರಿಸ್ಥಿತಿ ಘೋಷಣೆಮಾಡಿದ್ದರು. ಆ ಕರಾಳ ಅಧ್ಯಾಕಯಕ್ಕೆ ಜೂನ್25ಕ್ಕೆ 43 ವರ್ಷಗಳಾವೆ. 
ಈ ಹಿನ್ನಲೆಯಲ್ಲಿ ತುರ್ತು ಪರಿಸ್ಥಿತಿಯನ್ನು ನೆನೆದು ಪ್ರಧಾನಿ ಮೋದಿಯವರು ಟ್ವೀಟ್ ಮಾಡಿದ್ದು, 43 ವರ್ಷಗಳ ಹಿಂದೆ ಘೋಷಣೆ ಮಾಡಲಾಗಿದ್ದ ತುರ್ತು ಪರಿಸ್ಥಿತಿಯನ್ನು ಧೈರ್ಯದಿಂದ ವಿರೋಧಿಸಿ ಎಲ್ಲಾ ಮಹಿಳೆ ಹಾಗೂ ಮಹನೀಯರಿಗೆ ನನ್ನ ನಮನಗಳು. ತುರ್ತು ಪರಿಸ್ಥಿತಿಯ ಹೋರಾಟ ಸರ್ವಾಧಿಕಾರ ಮತ್ತು ನಾಗರೀಕ ಸ್ವಾತಂತ್ರ್ಯವನ್ನು ಹತ್ತಿಕ್ಕುವವರ ವಿರುದ್ಧ ಜನಶಕ್ತಿಗೆ ಸಿಕ್ಕ ಗೆಲುವಾಗಿದೆ ಎಂದು ಹೇಳಿದ್ದಾರೆ. 
ಮತ್ತೊಂದು ಟ್ವೀಟ್ ನಲ್ಲಿ, ತುರ್ತು ಪರಿಸ್ಥಿತಿ ಭಾರತದ ಅಧ್ಯಾಯದಲ್ಲಿ ಕರಾಳ ಅವಧಿಯಾಗಿದೆ. ತುರ್ತು ಪರಿಸ್ಥಿತಿಯನ್ನು ಭಾರತೀಯರು ಕರಾಳ ಅವಧಿ ಎಂದೇ ನೆನೆಯುತ್ತಿದ್ದಾರೆ. ಆ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಎಲ್ಲಾ ಸಂಸ್ಥೆಗಳನ್ನೂ ಕೆಳಗಿಳಿಸಲಾಗಿತ್ತು. ಜನರಲ್ಲಿ ಭಯವನ್ನು ಹುಟ್ಟುಹಾಕಲಾಗಿತ್ತು. ಜನರು ಅಷ್ಟೇ ಅಲ್ಲದೆ, ಅವರ ವೈಚಾರಿಕತೆ, ಸ್ವಾತಂತ್ರ್ಯವೆಲ್ಲವನ್ನೂ ಬಂಧಿಸಲಾಗಿತ್ತು. ರಾಜಕೀಯ ಶಕ್ತಿಯ ಮೂಲಕ ಎಲ್ಲವನ್ನೂ ಹತ್ತಿಕ್ಕಲಾಗಿತ್ತು ಎಂದು ತಿಳಿಸಿದ್ದಾರೆ. 
ನಮ್ಮ ಪ್ರಜಾಪ್ರಭುತ್ವ ತತ್ತ್ವಗಳು ಎಂದಿಗೂ ಬಲಾಢ್ಯವಾಗಿರುವಂತೆ ನೋಡಿಕೊಳ್ಳೋಣ. ಚರ್ಚೆ ಮಾಡುವುದು ಪ್ರಶ್ನಿಸುವುದು, ವಿವೇಚಿಸುವುದು ಇವೆಲ್ಲವೂ ಪ್ರಜಾಪ್ರಬುತ್ವಕ್ಕೆ ಅತ್ಯಗತ್ಯವಾಗಿ ಬೇಕಾದ ಸಂಗತಿಗಳಾಗಿವೆ. ಅದಕ್ಕಾಗಿ ನಾವು ಹೆಮ್ಮೆ ಪಡಬೇಕು. ಯಾವುದೇ ಶಕ್ತಿಯೂ ನಮ್ಮ ಸಂವಿಧಾನದ ಮೂಲಭೂತ ಹಕ್ಕುಗಳನ್ನು ಹಾಳು ಮಾಡುವುದಕ್ಕೆ ಬಿಡಬಾರದು ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ. 
1975 ಜೂನ್ 25 ರಂದು ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಹೇರಲು ಮುಂದಾಗಿದ್ದ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರಿಗೆ ಆಗಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಒಪ್ಪಿಗೆ ನೀಡಿದ್ದರು. 
ದೇಶದಲ್ಲಿ ಆಂತರಿಕ ಶಾಂತಿ ಕದಡಲಾಗುತ್ತಿದೆ ಎಂಬ ಕಾರಣ ನೀಡಿದ್ದ ಇಂದಿರಾಗಾಂಧಿಯವರು ಸಂವಿಧಾನದ 352ನೇ ವಿಧಿಯ ಪ್ರಕಾರ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದರು. ಆ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಯಾರೇ ಟೀಕಿಸಿದರೂ, ಸರ್ಕಾರದ ವಿರುದ್ಧ ಯಾವುದೇ ಕೆಲಸ ಮಾಡಿದ್ದರೂ ಅವರನ್ನು ಬಂಧನಕ್ಕೊಳಪಡಿಸುವ ಅಧಿಕಾರವಿತ್ತು. ಆದ್ದರಿಂದಲೇ ಈ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಜೈಲುವಾಸ ಅನುಭವಿಸಿದ್ದರು. ಭಾರತದ ಇತಿಹಾಸದಲ್ಲಿಯೇ ಅತ್ಯಂತ ವಿವಾದಾತ್ಮಕ ಅವಧಿಯಾಗಿ ತುರ್ತು ಪರಿಸ್ಥಿತಿ ದಾಖಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT