ಸಾಂದರ್ಭಿಕ ಚಿತ್ರ 
ದೇಶ

ಮಹಿಳೆಯರಿಗೆ ಭಾರತ ಅತ್ಯಂತ ಅಪಾಯಕಾರಿ: ಸಮೀಕ್ಷೆ ತಳ್ಳಿಹಾಕಿದ ಮಹಿಳಾ ಆಯೋಗ

ಮಹಿಳೆಯರ ಪಾಲಿಗೆ ಭಾರತ ಜಗತ್ತಿನ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂಬ ಸಮೀಕ್ಷೆಯನ್ನು ರಾಷ್ಟ್ರೀಯ ಮಹಿಳಾ....

ನವದೆಹಲಿ: ಮಹಿಳೆಯರ ಪಾಲಿಗೆ ಭಾರತ ಜಗತ್ತಿನ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂಬ ಸಮೀಕ್ಷೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ(ಎನ್ ಸಿ ಡಬ್ಲ್ಯೂ) ಮಂಗಳವಾರ ಸ್ಪಷ್ಟವಾಗಿ ತಳ್ಳಿಹಾಕಿದೆ.
ಭಾರತ ಆಫ್ಘಾನಿಸ್ತಾನ ಮತ್ತು ಸಿರಿಯಾಗಿಂತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶವಾಗಿದೆ ಎಂದು ಥಾಮ್ಸನ್ ರಾಯಿಟರ್ಸ್ ಫೌಂಡೇಷನ್ ಸಮೀಕ್ಷೆ ತಿಳಿಸಿದೆ.
ಆ ಸಮೀಕ್ಷಾ ವರದಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು, ಸಮೀಕ್ಷೆಗೆ ಬಳಸಿದ ಮಾದರಿ ಅತ್ಯಂತ ಕಡಿಮೆ ಇದ್ದು, ಅದು ಇಡೀ ದೇಶವನ್ನು ಪ್ರತಿನಿಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಭಾರತದಲ್ಲಿ ಮಹಿಳೆಯರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವಿದೆ ಮತ್ತು ಅಂತಹ ಒಂದು ಸಮೀಕ್ಷೆಯಲ್ಲಿ ನಮಗೆ ನಂಬರ್ 1 ಸ್ಥಾನ ನೀಡಬೇಕಾಗಿತ್ತು ಎಂದಿದ್ದಾರೆ.
ಮಹಿಳೆಯರಿಗೆ ಸಾರ್ವಜನಿಕವಾಗಿ ಮಾತನಾಡಲು ಅವಕಾಶ ನೀಡದ ದೇಶಗಳಿಗೆ ಭಾರತಕ್ಕಿಂತ ಹೆಚ್ಚಿನ ಸ್ಥಾನ ನೀಡಲಾಗಿದೆ ಎಂದು ಶರ್ಮಾ ನಿರ್ದಿಷ್ಟ ದೇಶವನ್ನು ಹೆಸರಿಸದೆ ಪರೋಕ್ಷವಾಗಿ ಸಿರಿಯಾ, ಅಫ್ಘಾನಿಸ್ತಾನಕ್ಕೆ ಟಾಂಗ್ ನೀಡಿದ್ದಾರೆ.
ಮಾರ್ಚ್ 26ರಿಂದ ಮೇ 4ರ ವರೆಗೆ ಮಹಿಳೆಯರ ಸಮಸ್ಯೆ ಕುರಿತಂತೆ ಒಟ್ಟಾರೆ ಜಾಗತಿಕವಾಗಿ 550 ಮಂದಿಯನ್ನು ಸಂಪರ್ಕಿಸಿದ್ದು, ಭಾರತದ ಮೂಲದ 43 ಮಹಿಳೆಯರಿಗೆ ಆರೋಗ್ಯ ರಕ್ಷಣೆ, ಆರ್ಥಿಕ ಸಂಪನ್ಮೂಲಗಳು ಮತ್ತು ತಾರತಮ್ಯದ ಪ್ರದೇಶ, ಸಾಂಪ್ರದಾಯಿಕ ಆಚರಣೆ, ಲೈಂಗಿಕ ಹಿಂಸಾಚಾರ, ಅಶ್ಲೀಲ ಹಿಂಸಾಚಾರ ಮತ್ತು ಮಾನವ ಕಳ್ಳಸಾಗಣೆ ಸಂಬಂಧಿಸಿದಂತೆ ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆ ಕುರಿತಂತೆ ಪ್ರಶ್ನೆಗಳನ್ನು ಕೇಳಲಾಗಿತ್ತು.
ಸಮೀಕ್ಷೆಯ ಪ್ರಕಾರ, ಮಹಿಳೆಯರನ್ನು ಬಲವಂತದಿಂದ ಗುಲಾಮಗಿರಿಗೆ ತಳ್ಳುವ ಹಾಗೂ ಲೈಂಗಿಕ ಹಿಂಸೆಯ ವಿಚಾರದಲ್ಲಿ ಭಾರತ ಮಹಿಳೆಯರಿಗೆ ತುಂಬಾ ಅಪಾಯಕಾರಿ ದೇಶವಾಗಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

SCROLL FOR NEXT