ಚಾರ್ಟರ್ಡ್ ವಿಮಾನ ಪತನ ದೃಶ್ಯ
ಮುಂಬೈ: ಮುಂಬೈನ ವಸತಿ ಪ್ರದೇಶದಲ್ಲಿ ಲಘು ವಿಮಾನವೊಂದು ಪತನಗೊಂಡಿದ್ದು ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮುಂಬೈನ ಘಾಟ್ ಕೋಪರ್ ಬಳಿಯ ಸರ್ವೋದಯ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಬಳಿ ವಿಮಾನ ಪತನಗೊಂಡಿದ್ದು ವಿಮಾನದಲ್ಲಿದ್ದ ಮುಖ್ಯ ಪೈಲಟ್ ಪಿಎಸ್ ರಜಪೂತ್, ಕೋ ಪೈಲಟ್ ಮಾರಿಯಾ ಝುಬೇರಿ, ಇಂಜಿನಿಯರ್ ಸುರ್ಬಿ ಮತ್ತು ಟೆಕ್ನಿಷನ್ ಮನೀಶ್ ಪಾಂಡೆ ಹಾಗೂ ಓರ್ವ ಸ್ಧಳೀಯ ವ್ಯಕ್ತಿ ಸೇರಿ ಐವರು ಸಜೀವ ದಹನವಾಗಿದ್ದಾರೆ.
ಕಿಂಗ್ ಏರ್ ಸಿ90 ಚಾರ್ಟರ್ಡ್ ವಿಮಾನ ಉತ್ತರಪ್ರದೇಶ ಸರ್ಕಾರದ್ದು ಎಂದು ಹೇಳಲಾಗಿತ್ತು. ಆದರೆ ವಿಮಾನ ಪತನ ನಂತರ ಇದೀಗ ಉತ್ತರಪ್ರದೇಶ ಸರ್ಕಾರ ಈ ವಿಮಾನವನ್ನು ಮಾರಾಟ ಮಾಡಲಾಗಿತ್ತು ಎಂದು ಹೇಳಿದೆ.
ವಿಮಾನ ಪತನದಿಂದ ಕಟ್ಟಡಕ್ಕೂ ಬೆಂಕಿ ತಲುಗಿದ್ದು ಕೂಡಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics