ಚೆನ್ನೈ: ಸದ್ಗುರು ಎಂದೇ ಪ್ರಸಿದ್ದರಾಗಿರುವ ಆದ್ಯಾತ್ಮಿಕ ಗುರು ಜಗ್ಗಿ ವಾಸುದೇವ್, ವೇದಾಂತ ಗ್ರೂಪ್ ನ ಸ್ಟೆರ್ಲೈಟ್ ತಾಮ್ರ ಘಟಕ ಮುಚ್ಚುವುದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ತಾಮ್ರ ಘಟಕ ಮುಚ್ಚುವುದು ಆರ್ಥಿಕತೆಯ ಆತ್ಮಹತ್ಯೆ ಎಂದು ಆರೋಪಿಸಿದ್ದಾರೆ.
ನಾನು ತಾಮ್ರ ಉತ್ಪಾದನೆಯಲ್ಲಿ ತಜ್ಞನಲ್ಲ, ಆದೆರ ಭಾರತಗದಲ್ಲಿ ತಾಮ್ರದ ಬಳಕೆ ಅಪಾರವಾಗಿದೆ ಎಂಬ ಬಗ್ಗೆ ನನಗೆ ತಿಳಿದಿದೆ, ನಮಗೆ ಅಗತ್ಯವಿರುವ ತಾಮ್ರವನ್ನು ನಾವು ಉತ್ಪಾದಿಸಿಕೊಳ್ಳದಿದ್ದರೇ ನಾವು ಆದನ್ನು ಚೀನಾದಿಂದ ಆಮದು ಮಾಡಿಕೊಳ್ಳಬೇಕಾಗುತ್ತದೆ. ಕಾನೂನು ಬದ್ಧವಾಗಿ ಪರಿಸರ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ತೂತುಕುಡಿ ಪ್ರತಿಭಟನೆಗೆ ಸಂಬಂಧಿಸಿದಂತೆ ನೀಡಿದ ಸಂದರ್ಶನಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ, ವೇದಾಂತ ಗ್ರೂಪ್ ನ ಮಾಲೀಕ ಅನಿಲ್ ಅಗರ್ ವಾಲ್ ಅವರನ್ನು ಲಂಡನ್ ನಲ್ಲಿ ಭೇಟಿ ಮಾಡಿದ್ದಾಗಿ ಯೋಗಗುರು ಬಾಬಾರಾಮದೇವ್ ಟ್ವೀಟ್ ಮಾಡಿದ್ದಾರೆ, ದೇಶಕ್ಕೆ ಅಗರ್ ವಾಲ್ ನೀಡಿದ ಕೊಡುಗೆ ಬಗ್ಗೆ ಶ್ಲಾಘಿಸಿದ್ದಾರೆ, ದೇಶ ಕಟ್ಟುವ ನಿಟ್ಟಿನಲ್ಲಿ ಅವರ ಕೊಡುಗೆ ಅಮೂಲ್ಯವಾದದದ್ದು, ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಸಿಸಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ.