ಸಾಂದರ್ಭಿಕ ಚಿತ್ರ 
ದೇಶ

ಬಾಂಗ್ಲಾದೇಶದಲ್ಲಿ ಪರಮಾಣು ಸ್ಥಾವರ ನಿರ್ಮಾಣ ಒಪ್ಪಂದಕ್ಕೆ ಭಾರತ ಸಹಿ

ಬಾಂಗ್ಲಾದೇಶದ ರೂಪ್ಪೂರ್ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣ ಹಾಗೂ ಅನುಸ್ಥಾಪನಾ ಕಾರ್ಯದಲ್ಲಿ ಭಾರತೀಯ ಕಂಪನಿಗಳು ಪಾಲ್ಗೊಳ್ಳಲಿದೆ ಎಂದು..........

ನವದೆಹಲಿ: ಬಾಂಗ್ಲಾದೇಶದ ರೂಪ್ಪೂರ್ ಪರಮಾಣು ವಿದ್ಯುತ್ ಸ್ಥಾವರ ನಿರ್ಮಾಣ ಹಾಗೂ ಅನುಸ್ಥಾಪನಾ ಕಾರ್ಯದಲ್ಲಿ ಭಾರತೀಯ ಕಂಪನಿಗಳು ಪಾಲ್ಗೊಳ್ಳಲಿದೆ ಎಂದು ರಷ್ಯಾದ ಪರಮಾಣು ಶಕ್ತಿ ಏಜನ್ಸಿ ರೊಸಾಟಮ್ ತಿಳಿಸಿದೆ.
ತೃತೀಯವಿಶ್ವದ ರಾಷ್ಟ್ರಗಲಲ್ಲಿ ಪರಮಾಣು ಇಂಧನ ಯೋಜನೆಗಳನ್ನು ಕೈಗೊಳ್ಳುವ ಉದ್ದೇಶದಿಂದ ಭಾರತ ಹಾಗೂ ರಷ್ಯಾ ಮಾಡಿಕೊಂಡಿದ್ದ ಒಪ್ಪಂದದ ಪ್ರಥಮ ಪ್ರಯತ್ನವೇ ರೂಪ್ಪೂರ್ ಯೋಜನೆ ಆಗಿದೆ. ಈ ಯೋಜನೆಯ ಮೂಲಕ  ಇದೇ ಮೊದಲ ಬಾರಿಗೆ ಭಾರತೀಯ ಕಂಪನಿಗಳು ವಿದೇಶದಲ್ಲಿ ಪರಮಾಣು ವಿದ್ಯುತ್ ಯೋಜನೆ ಕಾರ್ಯಗಳಲ್ಲಿ ಭಾಗವಹಿಸುತ್ತಿದೆ.
ಇನ್ನು ಭಾರತ ಪರಮಾಣು ಶಕ್ತಿ ಪೂರೈಕೆ ಗುಂಪು (ಎನ್ ಎಸ್ ಜಿ) ಸದಸ್ಯ ರಾಷ್ಟ್ರವಲ್ಲ ಹಾಗಾಗಿ ಇದು ನೇರವಾಗಿ ಪರಮಾಣು ರಿಯಾಕ್ಟರ್ ಗಳ ನಿರ್ಮಾಣದಲ್ಲಿ ಭಾಗವಹಿಸುವುದಿಲ್ಲ. ಆದರೆ ರೊಸಾಟಮ್ ಹೇಳಿಕೆ ಪ್ರಕಾರ ಭಾರತೀಯ ಕಂಪನಿಗಳು  ಬಾಂಗ್ಲಾದೇಶದಲ್ಲಿ  ನಿರ್ಮಾಣವಾಗುವ ರೂಪ್ಪೂರ್ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯಲ್ಲಿ ಭಾಗವಹಿಸಲಿದೆ. ಇದಕ್ಕಾಗಿ ಭಾರತ, ರಷ್ಯಾ ಹಾಗೂ ಬಾಂಗ್ಲಾದೇಶಗಳು ಒಪ್ಪಂದಕ್ಕೆ ಸಹಿ ಹಾಕಿದೆ.
ಮಾಸ್ಕೋದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು ಇದರಂತೆ ಸಿಬ್ಬಂದಿ ತರಬೇತಿ, ಅನುಭವೀ ಸಲಹೆಗಳ ವಿನಿಮಯಗಳ ವಿಚಾರದಲ್ಲಿ ಭಾರತ ಸಹಕಾರ ನೀಡಲಿದೆ.
ರಷ್ಯಾವು ಬಾಂಗ್ಲಾದೇಶದ ರೂಪ್ಪೂರ್ ನಲ್ಲಿ ತಲಾ  1,200 ಮೆಗಾವ್ಯಾಟ್ ಸಾಮರ್ಥ್ಯದ ಎರಡು ನ್ಯೂಕ್ಲಿಯರ್ ರಿಯಾಕ್ಟರ್ ಗಳನ್ನು ನಿರ್ಮಾಣ ಮಾಡುತ್ತಿದೆ. 
ರೂಪ್ಪೂರ್ ಪರಮಾಣು ವಿದ್ಯುತ್ ಯೋಜನೆಯು ಬಾಂಗ್ಲಾದೇಶದ ಪ್ರಥಮ ಪರಮಾಣು ವಿದ್ಯುತ್ ಯೋಜನೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!