ಸಂಗ್ರಹ ಚಿತ್ರ 
ದೇಶ

ಕಾರ್ತಿಗೆ ಮನೆ ಊಟ ನಿರಾಕರಣೆ, ಸ್ವಿಗ್ಗಿ, ಜೊಮಾಟೋ ಮೊರೆ ಹೋಗುತ್ತೇನೆ ಎಂದ ಚಿದಂಬರಂ ಪುತ್ರ

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ವಶದಲ್ಲಿರುವ ಮಾಜಿ ಕೇಂದ್ರ ಸಚಿವ ಕಾರ್ತಿ ಚಿದಂಬರಂಗೆ ನ್ಯಾಯಾಲಯ ಮನೆ ಊಟ ನಿರಾಕರಿಸಿದೆ.

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ವಶದಲ್ಲಿರುವ ಮಾಜಿ ಕೇಂದ್ರ ಸಚಿವ ಕಾರ್ತಿ ಚಿದಂಬರಂಗೆ ನ್ಯಾಯಾಲಯ ಮನೆ ಊಟ ನಿರಾಕರಿಸಿದೆ.
ನಿನ್ನೆ ಕಾರ್ತಿ ಚಿದಂಬರಂರನ್ನು ವಿಶೇಷ ನ್ಯಾಯಾಧೀಶ ಸುನಿಲ್‌ ರಾಣಾ ಅವರ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ಕಾರ್ತಿಯನ್ನು ನ್ಯಾಯಾಧೀಶರು ಐದು ದಿನಗಳ ಕಸ್ಟಡಿಗೆ ಒಪ್ಪಿಸಿದರು. ಕಾರ್ತಿ ಚಿದಂಬರಂ ಪರ ಕಾಂಗ್ರೆಸ್ ಮುಖಂಡ ಹಾಗೂ ವಕೀಲ ಅಭಿಶೇಕ್ ಮನು ಸಿಂಘ್ವಿ ಅವರು ವಾದ ಮಂಡಿಸುತ್ತಿದ್ದ ವೇಳೆ ಕೆಲ ಸ್ವಾರಸ್ಯಕರ ಸಂಭಾಷಣೆ ನಡೆಯಿತು.
ನ್ಯಾಯಾಧೀಶರು ಕಾರ್ತಿ ಚಿದಂಬರಂರನ್ನು ಸಿಬಿಐ ವಶಕ್ಕೆ ನೀಡಿತು. ಈ ವೇಳೆ ಇದ್ದಕ್ಕಿದ್ದಂತೆಯೇ ಕಾರ್ತಿ ತಮಗೆ ಮನೆ ಊಟ ಬೇಕು ಎಂದು ಮನವಿ ಮಾಡಿಕೊಂಡರು. ಇದನ್ನು ಕೇಳಿದ ನ್ಯಾಯಾಧೀಶರಾದ ರಾಣಾ ಅವರು, ಮನೆ ಊಟಕ್ಕೆ ಅನುಮತಿ ಇಲ್ಲ. ಜೈಲಿನ ಅಡುಗೆ ಸಿಬ್ಬಂದಿಗಳೇ ಉತ್ತಮವಾಗಿದ್ದಾರೆ ಎಂದು ಹೇಳಿದರು. 
ಈ ವೇಳೆ ಕಾರ್ತಿ ಚಿದಂಬರಂ ತಮ್ಮ ಬಳಿ ಇದ್ದ ಸಿಬಿಐ ಅಧಿಕಾರಿಯತ್ತ ಮುಖ ಮಾಡಿ ನಗುತ್ತಾ, ಹಾಗಾದರೇ ನಾನು ಸ್ವಿಗ್ಗಿ ಅಥವಾ ಜೊಮ್ಯಾಟೋ ಆ್ಯಪ್ ಗಳ ಮೊರೆ ಹೋಗಬೇಕಾಗುತ್ತದೆ. ನಿಮ್ಮ ಅಧಿಕಾರಿಗಳ ಬಳಿ ಈ ಆ್ಯಪ್ ಗಳು ಇರುತ್ತದೆ ಅಲ್ಲವೇ ಎಂದಾಗ ಅಧಿಕಾರಿ ನಕರಾತ್ಮಕವಾಗಿ ಉತ್ತರಿಸಿದರು. ಈ ವೇಳೆ ಕಾರ್ತಿ ಕೂಡ ಅದೇ ಧಾಟಿಯಲ್ಲಿ ಒಂದು ವೇಳೆ ನಿಮ್ಮ ಬಳಿ ಇಲ್ಲ ಎಂದಾದರೆ ಖಂಡಿತಾ ಈ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳ ಬೇಕಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!