ನವದೆಹಲಿ; ದೇಶದಾದ್ಯಂತ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.
ಹೋಳಿ ಹಬ್ಬ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ರಾಷ್ಟ್ರಪತಿ ರಾಮ್'ನಾಥ್ ಕೋವಿಂದ್ ಅವರು, ಶುಭದಿನವಾದ ಹೋಳಿ ಹಬ್ಬದ ದಿನ ಹಿನ್ನಲೆಯಲ್ಲಿ ಎಲ್ಲಾ ನಾಗರೀಕರಿಗೂ ಶುಭಾಶಯಗಳು. ಬಣ್ಣಗಳ ಹಬ್ಬ ಹೋಳಿ ನಮ್ಮ ಸಮಾಜದ ಸಾಮರಸ್ಯದ ಆಚರಣೆಯಾಗಿದೆ. ಪ್ರತೀಯೊಬ್ಬರ ಜೀವನಕ್ಕೆ ಇದು ಶಾಂತಿ, ಸಂತೋಷ ಹಾಗೂ ಸಮೃದ್ಧಿಯನ್ನು ತರಲಿ ಎಂದು ಹೇಳಿದ್ದಾರೆ.
ಇದರಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ ದೇಶದ ಜನತೆಗೆ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದು, ದೇಶದ ಪ್ರತೀಯೊಬ್ಬರಿಗೂ ಹೋಳಿ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.