ಫಾರಿದಾಕೋಟ್ : ಹೋಳಿ ಹಬ್ಬ ಸಂಭ್ರಮಾಚರಣೆ ವೇಳೆಯಲ್ಲಿನ ಗದ್ದಲ ಪ್ರಶ್ನಿಸಿದ್ದಕ್ಕೆ ಯುವಕನೋರ್ವ ಕೊಲೆಯಾಗಿರುವ ಘಟನೆ ಪಂಜಾಬ್ ನ ಫಾರಿದಾಕೋಟ್ ನಲ್ಲಿ ನಡೆದಿದೆ.
ಮೃತ ಯುವಕನನ್ನು ರಾಕೇಶ್ ಎಂದು ಗುರುತಿಸಲಾಗಿದೆ.ಪಿರ್ ಖಾನ್ ಬಸ್ತಿ ಬಳಿ 12 ಮಂದಿ ಯುವಕರ ತಂಡವೊಂದು ಹೋಳಿ ಹಬ್ಬ ಆಚರಿಸುತಿತ್ತು. ಈ ವೇಳೆ ರಾಕೇಶ್ ಹಾಗೂ ಆ ಯುವಕರ ಮಧ್ಯೆ ಜಗಳ ನಡೆದಿದೆ
ಉದ್ರಿಕ್ತ ಗುಂಪು ಬೇಸ್ ಬಾಲ್ ಬ್ಯಾಟ್ ಹಾಗೂ ಕಟ್ಟಿಗೆಗಳಿಂದ ರಾಕೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತಲೆಗೆ ತೀವ್ರ ತರದ ಪೆಟ್ಟು ಬಿದ್ದು ನರಳುತ್ತಿದ್ದ ರಾಕೇಶ್ ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.