ಪುಣೆ(ಮಹಾರಾಷ್ಟ್ರ): ಪುಣೆ ನಗರದಲ್ಲಿ ಚಾಯ್‌ವಾಲಾ ಒಬ್ಬರು ಟೀ ಮಾರಿ ತಿಂಗಳಿಗೆ 12 ಲಕ್ಷ ಸಂಪಾದಿಸಿ ಸುದ್ದಿಯಾಗಿದ್ದಾರೆ.
ಪುಣೆ ನಗರದಲ್ಲಿ ಇದೀಗ ಯೆವ್ಲೆ ಟೀ ಹೌಸ್ ಸಖತ್ ಫೇಮಸ್ ಆಗಿದೆ. ನವನಾಥ್ ಯೆವ್ಲೆ ಈ ಟೀ ಹೌಸ್ ನ ಸ್ಥಾಪಕರಾಗಿದ್ದು. ಶೀಘ್ರದಲ್ಲೇ ಇದನ್ನು ಅಂತಾರಾಷ್ಟ್ರೀಯ ಬ್ರಾಂಡ್ ಮಾಡುವುದಾಗಿ ಹೇಳಿದ್ದಾರೆ.
ದೇಶದಲ್ಲಿ ಪಕೋಡಾ ವ್ಯವಹಾರದಂತೆ, ಚಹಾ ಮಾರಾಟದ ವ್ಯವಹಾರವ ಭಾರತೀಯರಿಗೆ ಉದ್ಯೋಗವಕಾಶವನ್ನು ಸೃಷ್ಟಿಸುತ್ತಿದೆ. ಈ ವ್ಯವಹಾರ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದಕ್ಕೆ ನನಗೆ ಖುಷಿಯಾಗಿದೆ ಎಂದು ನವನಾಥ್ ಹೇಳಿದ್ದಾರೆ.
ಪುಣೆ ನಗರದ ಮೂರು ಕಡೆ ಯೆವ್ಲೆ ಟೀ ಹೌಸ್ ಇದ್ದು ಪ್ರತಿಯೊಂದು ಸೆಂಟರ್ ನಲ್ಲೂ 12 ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.