ನವದೆಹಲಿ: ದೆಹಲಿ ಮುಖ್ಯ ಕಾರ್ಯದರ್ಶಿ ಮೇಲಿನ ಹಲ್ಲೆ ಪ್ರಕರಣ ಸಂಬಂಧ ವಿಚಾರಣಾ ಸಭೆಗೆ ಹಾಜರಾಗದ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ವಿರುದ್ಧ ಹೊರಡಿಸಲಾಗಿದ್ದ ಹಕ್ಕುಚ್ಯುತಿ ನೋಟೀಸ್ ಪ್ರಶ್ನಿಸಿ ಪ್ರಕಾಶ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯವು ಪ್ರಕಾಶ್ ಅವರ ಅರ್ಜಿ ವಿಚಾರಣೆಗಾಗಿ ಸಮ್ಮತಿ ಸೂಚಿಸಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಹಾಗೂ ನ್ಯಾಯಮೂರ್ತಿ ಸಿ.ಹರಿಶಂಕರ್ ಅವರನ್ನೊಳಗೊಂಡ ಪೀಠವು ಪ್ರಕಾಶ್ ಅವರ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು ಪ್ರಕಾಶ್ ಪರ ವಕೀಲರಾದ ವಿವೇಕ್ ಚಿಯಾಬ್ ವಾದ ಮಂಡಿದಿದ್ದು ’ಪ್ರಕಾಶ್ ಅವರಿಗೆ ಯಾವುದೇ ದೂರಿನ ಪ್ರತಿಯನ್ನಾಗಲಿ, ಅದರ ನಕಲನ್ನಾಗಲಿ ನೀಡದೆ ನೇರವಾಗಿ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗಿ ಎಂದು ಕರೆ ನೀಡಲಾಗಿತ್ತು ಎಂದರು.
ವಿಚಾರಣೆ ಆಲಿಸಿದ ನ್ಯಾಯಾಲಯವು ಕೇಜ್ರಿವಾಲ್ ಸರ್ಕಾರ ತಮ್ಮ ಕೋಪ ತಾಪಗಳನ್ನು ಕಡಿಮೆ ಮಾಡಬೇಕು, ಶಾಂತವಾಗಿ ವರ್ತಿಸಬೇಕೆಂದು ಅಭಿಪ್ರಾಯಪಟ್ಟಿದೆ.ಇಂತಹಾ ನೋಟೀಸ್ ಕಳಿಸುವುದರಿಂದ ದೆಹಲಿ ಸರ್ಕಾರ ಹಾಗೂ ಆಡಳಿತಷಾಹಿಗಳ ನಡುವಿನ ಬಿಕ್ಕಟ್ಟು ಇನ್ನಷ್ಟು ಜಟಿಲವಾಗಲಿದೆ. ಇದು ಬೆಂಕಿಗೆ ತುಪ್ಪ ಸುರಿದಂತಾಗಲಿದೆ. ಹೀಗಾಗಿ ಸರ್ಕಾರ ಶಾಂತ ರೀತಿಯಲ್ಲಿ ಮುಂದುವರಿಯಬೇಕೆಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಸಮಿತಿಯ ಸಭೆಗೆ ಹಾಜರಾಗದ ಕಾರಣ ವಿಚಾರಣಾ ಆಯೋಗವು ಮುಖ್ಯ ಕಾರ್ಯದರ್ಶಿಗಳಿಗೆ ಫೆ.21ರಂದು ಹಕ್ಕುಚ್ಯುತಿ ನೋಟೀಸ್ ನೀಡಿತ್ತು.ಪ್ರಕಾಶ್ ಈ ಕುರಿತಂತೆ ಹೈಕೋರ್ಟ್ ಗೆ ತೆರಳುವುದಕ್ಕೆ ಮುನ್ನ ದೆಹಲಿ ವಿಧಾಸಭೆ ಸದಸ್ಯರ ಸಮಿತಿಯು ಪ್ರಕಾಶ್ ಓರ್ವ ’ಸುಳ್ಳುಗಾರ” ಎಂದು ಆರೋಪಿಸಿತ್ತು.
ಇದೇ ವೇಳೆ ಪ್ರಶ್ನೆ ಹಾಗೂ ಉಲ್ಲೇಕ ಸಮಿತಿ (ಮೆಂಬರ್ ಆಫ್ ಕ್ವಸ್ಚನ್ ಆಂಡ್ ರೆಫರೆನ್ಸ್ ಕಮಿಟಿ) ಸದಸ್ಯರು ಪ್ರಕಾಶ್ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುತ್ತಿರುವುದಕ್ಕೆ ಅವರ ವಿರುದ್ಧ ’ಫೋರ್ಜರಿ ಪ್ರೊಸಿಡಿಂಗ್ಸ್’ ಆರೋಪ ಹೊರಿಸಲಾಗುತ್ತದೆ ಎಂದು ಹೇಳಿದ್ದಾರೆ.
"ಮುಖ್ಯ ಕಾರ್ಯದರ್ಶಿ ಪ್ರಕಾಶ್ ಸಭೆಗೆ ಹಾಜರಾಗದ ಕಾರಣ ನಿಡಲಾದ ನೋಟೀಸ್ ಅನ್ನು ಪ್ರಶ್ನಿಸಿ ಹೈಕೊರ್ಟ್ ಗೆ ತೆರಳಿದ್ದಾರೆ. ಆದರೆ ಅವರು ಈ ಸಭೆಯು ಎನ್ ಪಿಎ ವಿಚಾರಕ್ಕಾಗಿ ಸಂಬಂಧಿಸಿದಎನ್ನುವುದನ್ನು ಮರೆಮಾಚುತ್ತಿದ್ದಾರೆ" ಎಂದು ಎಎಪಿ ಶಾಸಕರು ನಿನ್ನೆ ಹೇಳಿಕೆಯೊಂದರಲ್ಲಿ ತಿಳಿಸಿದ್ದರು.