ಸೂಪರ್ ಸ್ಟಾರ್ ರಜನಿ ರಾಜಕೀಯ ಭಾಷಣ ಕೇಳಲು ನೆರೆದಿದ್ದ ಜನಸ್ತೋಮ 
ದೇಶ

ಹೊಸ ತಲೈವಾ ಉದಯದಿಂದ ದಂಗಾದ ಎಐಎಡಿಎಂಕೆ ಸದಸ್ಯರು

ಇತ್ತೀಚಿಗಷ್ಟೇ ರಾಜಕೀಯ ಪ್ರವೇಶಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ತಮಿಳುನಾಡು ರಾಜಕೀಯದಲ್ಲಿಸಂಚಲನ ಮೂಡಿಸುತ್ತಿದ್ದಾರೆ.

ಚೆನ್ನೈ: ಇತ್ತೀಚಿಗಷ್ಟೇ ರಾಜಕೀಯ ಪ್ರವೇಶಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ತಮಿಳುನಾಡು ರಾಜಕೀಯದಲ್ಲಿಸಂಚಲನ ಮೂಡಿಸುತ್ತಿದ್ದಾರೆ.

ತಲೈವಾ ನಿನ್ನೆ ಮಾಡಿದ ರಾಜಕೀಯ ಭಾಷಣ ಕೇಳಲು ಸೇರಿದ್ದ ಜನಸ್ತೋಮ ಕಂಡು ಎಐಎಡಿಎಂಕೆ ಸದಸ್ಯರು ದಂಗಾಗಿ ಹೋಗಿದ್ದಾರೆ.

 ಸುಮಾರು 25 ರಿಂದ 30 ಲೋಕಸಭಾ ಸದಸ್ಯರು ರಜನಿ ರಾಜಕೀಯ ಪ್ರವೇಶ ಕುರಿತ ಮಾತುಗಳನ್ನ ಕೇಳಿದ್ದಾರೆ. ರಜನಿ ಭಾಷಣ  ತಮ್ಮ ಕ್ಷೇತ್ರದಲ್ಲಿ ಮತದಾರರ ಮೇಲೆ ಪರಿಣಾಮ ಬೀರಿದರೆ ಗತಿ ಏನು ಎಂಬ ಚಿಂತೆಯಲ್ಲಿದ್ದಾರೆ.

ತಮಿಳುನಾಡಿನ ಪ್ರತಿಯೊಂದು ಲೋಕಸಭಾ ಕ್ಷೇತ್ರದಿಂದಲೂ ಸುಮಾರು 50 ಸಾವಿರ ಎಐಎಡಿಎಂಕೆ ಮತದಾರರು ರಜನಿ ಪಕ್ಷದತ್ತ ಜಿಗಿಯುವ ಬಗ್ಗೆಯೂ ಊಹಾಪೋಹಗಳು ಹರಿದಾಡುತ್ತಿವೆ.

ಟಿವಿಗಳಲ್ಲಿ ರಜನಿ  ಭಾಷಣ ಕೇಳಿದ ಎಐಎಡಿಎಂಕೆಯ ಹಿರಿಯ ಸದಸ್ಯರೊಬ್ಬರು ತಮಗೆ ಇದೇ ಮೊದಲ ಹಾಗೂ ಕೊನೆಯ ಚುನಾವಣೆಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

SCROLL FOR NEXT