ಹೈದರಾಬಾದ್: 19 ವರ್ಷದ ತನ್ನ ಮಗ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿದ್ದ ಎಂದು ತಂದೆ ಮಗ ಕೈಯನ್ನೇ ಕತ್ತರಿಸಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಮೊಬೈಲ್ ನಲ್ಲಿ ತನ್ನ ಮಗ ಅಶ್ಲೀಲ ವಿಡಿಯೋಗಳಿಗೆ ದಾಸನಾಗಿದ್ದು ಸದಾ ಅಂತರ ವಿಡಿಯೋಗಳನ್ನು ನೋಡುತ್ತಿದ್ದ ಇದರಿಂದಾಗಿ ಆತನ ಕೈಯನ್ನೇ ಕತ್ತರಿಸಿರುವುದಾಗಿ ಬಂಧಿತ ತಂದೆ ಪೊಲೀಸರಿಗೆ ಹೇಳಿದ್ದಾರೆ.
ಬಂಧಿತ ಆರೋಪಿಯನ್ನು ಮೊಹಮ್ಮದ್ ಕಯ್ಯೂಮ್ ಖುರೇಷಿ ಎಂದು ಹೇಳಲಾಗಿದ್ದು ಕೊಲೆ ಯತ್ನ ಆರೋಪದಡಿ ಆತನನ್ನು ಚೈಲಿಗೆ ಕಳುಹಿಸಲಾಗಿದೆ.
ಹೈದರಾಬಾದ್ ನ ಪಹಾದಿ ಷರೀಫ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೊಹಮ್ಮದ್ ಖುರೇಷಿ ತನ್ನ ಮಗ ಖಲೀದ್ ಮಲಗಿದ್ದಾಗ ಆತನ ಕೈಯನ್ನು ಮಾಂಸ ಕತ್ತರಿಸುವ ಚಾಕುವಿನಿಂದ ಕತ್ತರಿಸಿ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇಬಲ್ ಆಪರೇಟರ್ ಆಗಿದ್ದ ಖಲೀದ್ ಅಶ್ಲೀಲ ವಿಡಿಯೋಗಳಿಗೆ ದಾಸನಾಗಿದ್ದ. ತಂದೆ ಖುರೇಷಿ ಪದೇ ಪದೆ ಈ ಚಾಳಿಯನ್ನು ಬಿಡುವಂತೆ ಹೇಳಿದರು. ಆದರೆ ತಂದೆಯ ಮಾತನ್ನು ಕೇಳದ ವಿಡಿಯೋ ನೋಡುವುದರಲ್ಲೇ ತಲ್ಲಿನನಾಗುತ್ತಿದ್ದ. ಇದು ಆತನ ಆರೋಗ್ಯ ಮತ್ತು ಕೆಲಸ ಮೇಲೆ ಪರಿಣಾಮ ಬೀರುತ್ತಿತ್ತು ಹೀಗಾಗಿ ತಂದೆ ಖುರೇಷಿ ಈ ದುಷ್ಕೃತ್ಯ ಎಸಗಿದ್ದಾರೆ.