ದೇಶ

ಅತ್ಯಾಚಾರ ವಿರೋಧಿ ಆಂದೋಲನ: ಡಿಸಿಡಬ್ಲ್ಯೂ ಅಧ್ಯಕ್ಷೆ ಸ್ವಾತಿ ಮಾಲಿವಾಲ ಬಂಧನ

Raghavendra Adiga
ನವದೆಹಲಿ: ದೆಹಲಿ ಮಹಿಳಾ ಆಯೋಗ(ಡಿಸಿಡಬ್ಲ್ಯೂ )  ದ ಅಧ್ಯಕ್ಷೆ ಸ್ವಾತಿ ಮಾಲಿವಾಲ ಅವರನ್ನು ದೆಹಲಿ ಪೋಲೀಸರು ಬಂಧಿಸಿದ್ದಾರೆ.
’ರೇಪ್ ರೋಕೋ’ ಅಭಿಯಾನವನ್ನು ಬೆಂಬಲಿಸಿ ಸಹಿ ಮಾಡಿದ್ದ ಪತ್ರಗಳನ್ನು ಹಸ್ತಾಂತರಿಸುವ ಸಲುವಾಗಿ ಡಿಸಿಡಬ್ಲ್ಯೂ  ಸದಸ್ಯರೊಡನೆ ಪ್ರಧಾನ ಮಂತ್ರಿ ಕಛೇರಿಗೆ ತೆರಳುತ್ತಿದ್ದಾಗ ಅವರನ್ನು ಬಂಧಿಸಲಾಗಿದೆ.
’ತಾವು ಪತ್ರಗಳನ್ನು ಹಸ್ತಾಂತರಿಸಲಿಕ್ಕಾಗಿ ಪ್ರಧಾನಿಗಳ ಕಛೇರಿಗೆ ತೆರಳುವುದಾಗಿ ಕಛೇರಿ ಸಿಬ್ಬಂದಿ ಹಾಗೂ ಪೋಲೀಸರಿಗೆ ಸ್ವಾತಿ ಈ ಹಿಂದೆಯೇ ಮಾಹಿತಿ ನೀಡಿದ್ದರು. ಅವರು ಅತ್ಯಾಚಾರ ವಿರೋಧಿಸಿ ಸಹಿ ಮಾಡಲಾಗಿದ್ದ 5.55 ಲಕ್ಷ ಪತ್ರಗಳನ್ನು ಪ್ರಧಾನಿಗೆ ತಲುಪಿಸುವವರಿದ್ದರು. ಇದು ದೆಹಲಿ ಪೋಲೀಸರ ಅಕ್ರಮ ನಡವಳಿಕೆ’ ಎಂದು  ಎಎಪಿ ಪಕ್ಷದ ಮಾದ್ಯಮ ಸಂಯೋಜಕಿ ವಂದನಾ ಸಿಂಗ್ ಟ್ವೀಟ್ ಮಾಡಿದ್ದಾರೆ.
ಮಕ್ಕಳ ಮೇಲೆ ಅತ್ಯಾಚಾರಎಸಗಿದ ಆರೋಪಿಗಳಿಗೆ ಆರು ತಿಂಗಳ ಅವಧಿಯಲ್ಲಿ ಕಠಿಣ ಶಿಕ್ಷೆ ಒದಗಿಸಬೇಕೆಂದು ಕೋರಿ ಡಿಸಿಡಬ್ಲ್ಯೂ ಸಾರ್ವಜನಿಕ ಅಭಿಯಾನವೊಂದನ್ನು ಪ್ರಾರಂಭಿಸಿತ್ತು. ರೇಪ್ ರೋಕೋ ಹೆಸರಿನ ಅಭಿಯಾನವನ್ನು ಬೆಂಬಲಿಸಿ ದೆಹಲಿಯ ಲಕ್ಷಾಂತರ ಮಂದಿ ಸಹಿ ಮಾಡಿದ್ದರು.
SCROLL FOR NEXT