ಬಿಜೆಪಿ ಶಾಸಕ ರಾಜ್ ಪುರೋಹಿತ್ 
ದೇಶ

ಲೆನಿನ್ ಅವರ ಎಲ್ಲಾ ಪ್ರತಿಮೆಗಳನ್ನು ಧ್ವಂಸಗೊಳಿಸಬೇಕು; ಬಿಜೆಪಿ ಶಾಸಕ

ಭಾರತದಲ್ಲಿರುವ ರಷ್ಯಾ ಕಮ್ಯುನಿಸ್ಟ್ ನಾಯಕ ವ್ಲಾದಿಮಿರ್ ಲೆನಿನ್ ಅವರ ಎಲ್ಲಾ ಪ್ರತಿಮೆಗಳನ್ನು ಧ್ವಂಸಗೊಳಿಸಬೇಕೆಂದು ಬಿಜೆಪಿ ಶಾಸಕರೊಬ್ಬರು ಗುರುವಾರ ಹೇಳಿದ್ದಾರೆ...

ಮುಂಬೈ: ಭಾರತದಲ್ಲಿರುವ ರಷ್ಯಾ ಕಮ್ಯುನಿಸ್ಟ್ ನಾಯಕ ವ್ಲಾದಿಮಿರ್ ಲೆನಿನ್ ಅವರ ಎಲ್ಲಾ ಪ್ರತಿಮೆಗಳನ್ನು ಧ್ವಂಸಗೊಳಿಸಬೇಕೆಂದು ಮಹಾರಾಷ್ಟ್ರದ ಬಿಜೆಪಿ ಶಾಸಕರೊಬ್ಬರು ಗುರುವಾರ ಹೇಳಿದ್ದಾರೆ. 
ತ್ರಿಪುರದಲ್ಲಿ ಲೆನಿನ್ ಅವರ ಪ್ರತಿಮೆಗಳನ್ನು ಧ್ವಂಸಗೊಳಿಸಿರುವುದನ್ನು ನಾನು ಸ್ವಾಗತಿಸುತ್ತೇನೆ. ದೇಶದಲ್ಲಿರುವ ಲೆನಿನ್ ಅವರ ಎಲ್ಲಾ ಪ್ರತಿಮೆಗಳನ್ನೂ ನಾಶಪಡಿಸಬೇಕೆಂದು ಬಿಜೆಪಿ ಶಾಸಕ ರಾಜ್ ಪುರೋಹಿತ್ ಅವರು ಹೇಳಿದ್ದಾರೆ. 
ಲೆನಿನ್ ಅವರ ಪ್ರತಿಮೆ ನಾಶಪಡಿಸಿರುವುದಕ್ಕೆನನಗೆ ಬಹಳ ಸಂತೋಷವಾಗುತ್ತಿದೆ. ಅಧಿಕಾರದ ಆಸೆಯಿಂದಾಗಿ ತ್ರಿಪುರಾದಲ್ಲಿ ಲೆನಿನ್ ಅವರ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿತ್ತು. ಭಾರತಕ್ಕೆ ಲೆನಿನ್ ಅವರು ನೀಡುರುವ ಕೊಡುಗೆಯಾದರೂ ಏನು? ಲೆನಿನ್ ಪ್ರತಿಮೆ ಅವಮಾನದ ಸಂಕೇತವಾಗಿದ್ದು, ಅವರ ಎಲ್ಲಾ ಪ್ರತಿಮೆಗಳನ್ನು ಧ್ವಂಸಗೊಳಿಸಬೇಕು. ರಷ್ಯಾದ ಕಮ್ಯುನಿಸ್ಟ್ ನಾಯಕ ಹಲವಾರು ಜನರನ್ನು ಹತ್ಯೆ ಮಾಡಿದ್ದು. ಆತನನ್ನು ಭಾರತದ ಅಹಿಂಸೆ ಹಾಗೂ ಮಾನವೀಯತೆಯ ಸಿದ್ಧಾಂತದೊಂದಿಗೆ ಹೋಲಿಕೆ ಮಾಡಬಾರದು. ಆತ ಎಂದಿಗೂ ತನ್ನ ಆಡಲಿತದಲ್ಲಿ ಸಮಾನತೆಯನ್ನು ನೀಡಿರಲಿಲ್ಲ ಎಂದು ತಿಳಿಸಿದ್ದಾರೆ. 
ಇದೇ ವೇಳೆ ಆರ್'ಎಸ್ಎಸ್'ನ್ನು ಕೊಂಡಾಡಿರುವ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಿದ್ಧಾಂತಗಳು ಭಾರತಕ್ಕೆ ಉತ್ತಮವಾದದ್ದು. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರು ಪ್ರತೀಯೊಬ್ಬ ವ್ಯಕ್ತಿಯನ್ನೂ ಸಮಾನತೆಯಿಂದ ನೋಡಿದ್ದರು ಎಂದಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್, ಇಂದು ರಾಜೀನಾಮೆ ಅನುಮಾನ..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಕ್ಲೈಮ್ಯಾಕ್ಸ್‌ ಹಂತಕ್ಕೆ ಕುರ್ಚಿ ಕದನ: ಸಿಎಂ ಸ್ಥಾನಕ್ಕೆ ಡಿಕೆ ಶಿವಕುಮಾರ್ ಹೆಸರು ಫೈನಲ್?, ಮೇ 31ಕ್ಕೆ ಪ್ರಮಾಣವಚನ ಸಾಧ್ಯತೆ

ಸಿಎಂ ಕುರ್ಚಿ ಕದನ: ಸಿದ್ದರಾಮಯ್ಯ ಮನೆ ಮುಂದೆ ಬೆಂಬಲಿಗರ ಶಕ್ತಿ ಪ್ರದರ್ಶನ, ರಾಜೀನಾಮೆ ನೀಡದಂತೆ ಆಗ್ರಹ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

SCROLL FOR NEXT