ಬೈಕ್ ನಿಂದ ಬಿದ್ದು ಮಹಿಳೆ ಸಾವು 
ದೇಶ

ಹೆಲ್ಮೆಟ್ ಧರಿಸದಿದ್ದಕ್ಕೆ ಬೈಕ್ ಗೆ ಒದ್ದ ಸಂಚಾರಿ ಪೊಲೀಸ್: ಕೆಳಗೆ ಬಿದ್ದು ಗರ್ಭಿಣಿ ಸಾವು

ಹೆಲ್ಮೆಟ್ ಧರಿಸದ್ದಕ್ಕೆ ಟ್ರಾಫಿಕ್ ಇನ್ಸ್ ಪೆಕ್ಟರ್ ಬೈಕ್ ಗೆ ಒದ್ದ ಪರಿಣಾಮ ಕೆಳಗೆ ಬಿದ್ದ ಗರ್ಭಿಣಿ ಮಹಿಳೆ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ

ತಮಿಳುನಾಡು: ಹೆಲ್ಮೆಟ್ ಧರಿಸದ್ದಕ್ಕೆ ಟ್ರಾಫಿಕ್ ಇನ್ಸ್ ಪೆಕ್ಟರ್ ಬೈಕ್ ಗೆ ಒದ್ದ ಪರಿಣಾಮ ಕೆಳಗೆ ಬಿದ್ದ ಗರ್ಭಿಣಿ ಮಹಿಳೆ  ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ.
ಹೆಲ್ಮೆಟ್ ಧರಿಸಿಲ್ಲ ಎಂದು ಬೈಕ್ ಮೇಲೆ ಹೋಗುತ್ತಿದ್ದ ದಂಪತಿಗಳನ್ನು ಪೊಲೀಸರು ಬೆನ್ನತ್ತಿದ್ದಾರೆ. ಈ ವೇಳೆ ಪೊಲೀಸರು ದಂಪತಿ ಹೋಗುತ್ತಿದ್ದ ಬೈಕ್ ಗೆ ಒದೆದಿದ್ದಾರೆ, ಈ ಘಟನೆಯಲ್ಲಿ ಬೈಕ್‌ನಿಂದ ಗರ್ಭಿಣಿ ಜಾರಿ ಬಿದ್ದಿದ್ದಾರೆ. ತೀವ್ರವಾಗಿ ಗಾಯಗೊಂಡ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದು, ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ..
ತಿರುಚ್ಚಿ-ತಂಜಾವೂರು ರಾಷ್ಟ್ರೀಯ ಹೆದ್ದಾರಿ ಥುವಕುಡಿಯ ಗಣೇಶ ಸರ್ಕಲ್‌ ಬಳಿ ಟ್ರಾಫಿಕ್ ಪೊಲೀಸರು ತನಿಖೆ ಮಾಡುತ್ತಿದ್ದರು. ಇದೇ ಸಮಯದಲ್ಲಿ ಸೂಲಪೇಟೆ ಮೂಲದ ರಾಜ ಆತನ ಪತ್ನಿ ಉಷಾ ಬೈಕ್ ಮೇಲೆ ಹೋಗುತ್ತಿದ್ದರು. ಅವರ ಬೈಕನ್ನು ಪೊಲೀಸರು ನಿಲ್ಲಿಸುವ ಪ್ರಯತ್ನ ಮಾಡಿದರು. ಆದರೆ ಬೈಕ್ ನಿಲ್ಲಿಸದೆ ರಾಜ ಮುಂದೆ ಸಾಗಿದರು.
ಈ ಘಟನೆಯಿಂದ ರೊಚ್ಚಿಗೆದ್ದ ಮೃತರ ಕುಟುಂಬಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ಕ್ರಮವನ್ನು ವಿರೋಧಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.ಸ್ಥಳೀಯರ ದಾಳಿಯಲ್ಲಿ ಪೊಲೀಸರ ವಾಹನಗಳು ಜಖಂ ಆಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಪುಟಕ್ಕೆ ಹೊಸ ಪೀಳಿಗೆ, ಹೊಸ ಆಲೋಚನೆ ಇರುವವರು ಸೇರಬೇಕು, ನಾವು ಎಷ್ಟು ದಿನ ಗೂಟ ಹೊಡೆದುಕೊಂಡು ಕೂರಲು ಸಾಧ್ಯ'?: ಡಿ ಕೆ ಶಿವಕುಮಾರ್

ಕೃಷಿ ಭೂಮಿ ಸೇರಿದಂತೆ ಎಲ್ಲಾ ಸ್ವತ್ತಿಗೂ ಸ್ವಯಂ ಚಾಲಿತ ಮ್ಯುಟೇಷನ್‌: ಕಂದಾಯ ಸಚಿವ ಕೃಷ್ಣಬೈರೇಗೌಡ

ಅಗ್ನಿಶಾಮಕ ಇಲಾಖೆಯಲ್ಲಿ ಖಾಲಿ ಇರುವ 1,600 ಹುದ್ದೆ ಶೀಘ್ರವೇ ಭರ್ತಿ: ಜಿ. ಪರಮೇಶ್ವರ

ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ: ವಯೋಮಿತಿ 5 ವರ್ಷ ಸಡಿಲಿಕೆ; ಸಮಸ್ಯೆಗೆ ಬಿಜೆಪಿಯೇ ಕಾರಣ ಎಂದ CM

'ದೇಶದ ಘನತೆಗೆ ಮಾಡಿದ ಭೀಕರ ದ್ರೋಹ': ಕಾಂಗ್ರೆಸ್ಸಿಗರ ಅರೆಬೆತ್ತಲೆ ಪ್ರತಿಭಟನೆಗೆ ಜಡ್ಜ್‌ಗಳು ಸೇರಿ 270 ನಿವೃತ್ತ ಅಧಿಕಾರಿಗಳ ಖಂಡನೆ!

SCROLL FOR NEXT