ದೇಶ

ನಾನು ಇಸ್ಲಾಂಗೆ ಮತಾಂತರವಾಗಿದ್ದೇ ಇಷ್ಟಕ್ಕೆಲ್ಲಾ ಕಾರಣ: ಹದಿಯಾ

Shilpa D
ಕೊಜಿಕ್ಕೋಡ್: ಶಂಕಿತ 'ಲವ್ ಜಿಹಾದ್' ಪ್ರಕರಣದ ಸಂತ್ರಸ್ತೆ ಹದಿಯಾ ಅಲಿಯಾಸ್ ಅಖಿಲಾಳ ಮದುವೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ ಇದರ ಬೆನ್ನಲ್ಲೇ ಮೊದಲ ಬಾರಿಗೆ ಹದಿಯಾ ಶನಿವಾರ ಕೇರಳಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಹದಿಯಾ, ನಾನು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದೆ ಇಷ್ಟಕ್ಕೆಲ್ಲಾ ಕಾರಣವಾಯಿತು,ಪ್ರತಿಯೊಬ್ಬ ನಾಗರಿಕನೂ ತನಗೆ ಇಷ್ಟ ಬಂದ ಧರ್ಮವನ್ನು ಅನುಸರಿಸಲು ಸಂವಿಧಾನದಲ್ಲಿ ಅವಕಾಶವಿದೆ ಎಂದು ಹೇಳಿದ್ದಾರೆ.
ಹದಿಯಾ ತನ್ನ ಪತಿ ಜೊತೆ ಶನಿವಾರ ಸೇಲಂ ನ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. 
ತಮ್ಮ ವಿವಾಹವನ್ನು ಸುಪ್ರಿಂ ಕೋರ್ಟ್ ಊರ್ಜಿತಗೊಳಿಸಿದ್ದಕ್ಕೆ ನಮಗೆ ಸ್ವಾತಂತ್ರ್ಯ ಸಿಕ್ಕಿದೆ, ಕೇರಳ ಹೈಕೋರ್ಟ್ ವಿವಾಹವನ್ನು ರದ್ದುಗೊಳಿಸಿತ್ತು, 24 ವರ್ಷದ ಅಖಿಲಾ ಅಶೋಕ್ ಶಫೀನಾ ಜಹಾನ್  ಅವರನ್ನು ವಿವಾಹವಾಗಲು  ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ತಮ್ಮ ಮಗಳನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಹದಿಯಾ ತಂದೆ ಆರೋಪಿಸಿದ್ದರು, ಶಫೀನ್ ಜಹಾನ್  ಭಯೋತ್ಪದಕ ಗುಂಪಿಗೆ ಸೇರಿದವರಾಗಿದ್ದಾರೆ ಎಂದು ದೂರಿದ್ದರು.
ಪಿಎಫ್ ಐ ನಮಗೆ ಬೆಂಬಲ ನೀಡಿತ್ತು, ಕೆಲ ಮುಸ್ಲಿಂ ಸಂಘಟನೆಗಳು ನಮಗೆ  ಬೆಂಬಲ ನೀಡಲು ನಿರಾಕರಿಸಿದರು. ತಮಿಳುನಾಡಿನ ಸೇಲಂ ಗೆ ತೆರಳುವ ಮುನ್ನ ಕೇರಳಕ್ಕೆ ಆಗಮಿಸಿರುವ ಹದಿಯಾ ದಂಪತಿ ಮೂರು ದಿನಗಳ ಕಾಲ ಕೇರಳದಲ್ಲಿ ಇರಲಿದ್ದಾರೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಜಸ್ಟಿಸ್ ಎ.ಎಂ ಖಾನ್ವಿಲ್ಕರ್ ಮತ್ತು ಡಿ.ಬವೈ ಚಂದ್ರಚೂಡ್ ಅವರ ವಿಭಾಗೀಯ ಪೀಠ ಹದಿಯಾ ಮತ್ತು ಜಹಾನ್ ಮದುವೆಯನ್ನು ಮರು ಊರ್ಜಿತಗೊಳಿಸಿದೆ. ಹದಿಯಾಳ ಒಪ್ಪಿಗೆ ಮೇರೆಗೇ ಈ ಮದುವೆ ನಡೆದಿದೆ ಎಂಬುದು ವಿಚಾರಣೆ ವೇಳೆ ಸುಪ್ರೀಂ ಕೋರ್ಟಿನ ಗಮನಕ್ಕೆ ಬಂದಿದೆ.
SCROLL FOR NEXT