ಸೇನಾ ಠಾಣೆಗೆ ತನ್ನ ತಂದೆಯ ಹೆಸರಿಟ್ಟಿರುವುದನ್ನು ತಿಳಿದ ಲೇಡಿ ಲೆಫ್ಟಿನೆಂಟ್ ಸಂತೋಷಕ್ಕೆ ಮಿತಿಯೇ ಇಲ್ಲ!
ಅರುಣಾಚಲ ಪ್ರದೇಶದ ತೆಂಗದಲ್ಲಿರುವ ಸೇನಾ ಠಾಣೆಗೆ ತನ್ನ ತಂದೆ ಹೆಸರಿಡಲಾಗಿದ್ದನ್ನು ಕಂಡ ಭಾರತೀಯ ಸೇನೆಯ ಲೇಡಿ ಲೆಫ್ಟಿನೆಂಟ್ ಮೂಕವಿಸ್ಮಿತರಾದ ಘಟನೆ ನಡೆದಿದೆ...
ಕೋಲ್ಕತ್ತಾ: ಅರುಣಾಚಲ ಪ್ರದೇಶದ ತೆಂಗದಲ್ಲಿರುವ ಸೇನಾ ಠಾಣೆಗೆ ತನ್ನ ತಂದೆ ಹೆಸರಿಡಲಾಗಿದ್ದನ್ನು ಕಂಡ ಭಾರತೀಯ ಸೇನೆಯ ಲೇಡಿ ಲೆಫ್ಟಿನೆಂಟ್ ಮೂಕವಿಸ್ಮಿತರಾದ ಘಟನೆ ನಡೆದಿದೆ.
ಲೆಫ್ಟಿನೆಂಟ್ ಆಗಿ ಆಯ್ಕೆಯಾಗಿದ್ದ ಯುವತಿಯನ್ನು ಆರಂಭದಲ್ಲಿ ಅರುಣಾಚಲ ಪ್ರದೇಶದ ತೆಂಗದಲ್ಲಿರುವ ಆಶಿಶ್ ಟಾಪ್ ಎಂಬ ಸೇನಾ ಠಾಣೆಗೆ ನಿಯೋಜಿಸಲಾಗಿತ್ತು. ಅಲ್ಲಿ ಆಕೆ ಈ ಠಾಣೆಗೆ ಹೆಸರು ಹೇಗೆ ಬಂತು, ಯಾರ ಹೆಸರು ಹೀಗೆಲ್ಲಾ ಸಮಗ್ರ ಸಂಶೋಧನೆಗೆ ನಡೆಸಿದಾಗ ಅದು ತನ್ನ ತಂದೆಯ ಹೆಸರು ಎಂದು ಕೇಳಿ ಆಕೆ ಆಶ್ಚರ್ಯ ಮತ್ತು ಸಂತೋಷದಿಂದ ಮೂಕವಿಸ್ಮಿತರಾದರು.
ಆಶಿಶ್ ದಾಸ್ ಅವರು ಅಸ್ಸಾಂ ರೆಜಿಮೆಂಟ್ ನಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ತಂದೆಯಂತೆ ಮಗಳು ಸಹ ಸೇನೆಗೆ ಸೇರಿ ದೇಶ ಸೇವೆಯಲ್ಲಿ ತೊಡಗಿದ್ದಾರೆ. ಇನ್ನು ತಂದೆ ಹೆಸರಿರುವ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಮಗಳ ಸಂತೋಷದ ವಿಷಯವನ್ನು ಆಶಿಶ್ ಟಾಪ್ ಯುನಿಟ್ ನ ಕಮಾಂಡಿಂಗ್ ಆಫೀಸರ್ ಮನೆಗೆ ಕರೆ ಮಾಡಿ ವಿಷಯ ತಿಳಿಸಿದರು ಎಂದು ಆಶಿಶ್ ದಾಸ್ ಹೇಳಿದ್ದಾರೆ.
1986ರಲ್ಲಿ ಅರುಣಾಚಲ ಪ್ರದೇಶದಲ್ಲಿದ್ದ ಈ ಯುನಿಟ್ ನಮ್ಮ ವಶದಿಂದ ತಪ್ಪಿತ್ತು. ಆಗ ನನ್ನ ಮಗಳು ಹುಟ್ಟಿರಲಿಲ್ಲ. ಈ ಯುನಿಟ್ ನಿಂದ ಚೀನಾ ಪಡೆಯನ್ನು ಹೊರದಬ್ಬಿ ಮರು ವಶಕ್ಕೆ ಪಡೆದ ಬಳಿಕ 2003ರಲ್ಲಿ ಇದಕ್ಕೆ ನನ್ನ ಹೆಸರು ಇಡಲಾಗಿತ್ತು ಎಂದು ಆಶಿಶ್ ದಾಸ್ ವಿವರಿಸಿದ್ದಾರೆ.