ಭಾರತಕ್ಕೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷರಿಗೆ 'ಗಾರ್ಡ್ ಆಫ್ ಹಾನರ್' ಗೌರವ 
ದೇಶ

ಭಾರತಕ್ಕೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷರಿಗೆ 'ಗಾರ್ಡ್ ಆಫ್ ಹಾನರ್' ಗೌರವ

4 ದಿನಗಳ ಪ್ರವಾಸಕ್ಕೆಂದು ಭಾರತಕ್ಕೆ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಅವರು ರಾಜಧಾನಿ ದೆಹಲಿಗೆ ಆಗಮಿಸಿದ್ದು, ಶನಿವಾರ ಭಾರತೀಯ ಸೈನಿಕರಿಂದ ಗಾರ್ಡ್ ಆಫ್ ಹಾನರ್ ಗೌರವ...

ನವದೆಹಲಿ: 4 ದಿನಗಳ ಪ್ರವಾಸಕ್ಕೆಂದು ಭಾರತಕ್ಕೆ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಅವರು ರಾಜಧಾನಿ ದೆಹಲಿಗೆ ಆಗಮಿಸಿದ್ದು, ಶನಿವಾರ ಭಾರತೀಯ ಸೈನಿಕರಿಂದ ಗಾರ್ಡ್ ಆಫ್ ಹಾನರ್ ಗೌರವ ಸ್ವೀಕರಿಸಿದರು. 
ಇಂದು ಬೆಳಿಗ್ಗೆ ಪತ್ನಿ ಬ್ರಿಗಿಟ್ಟೆ ಅವರೊಂದಿಗೆ ದೆಹಲಿಗೆ ಆಗಮಿಸಿದ ಮ್ಯಾಕ್ರೋನ್ ಅವರು ಮೊದಲಿಗೆ ರಾಜ್ ಘಾಟ್'ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸ್ಮಾರಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಬಳಿಕ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಮ್ಯಾಕ್ರೋನ್ ಅವರಿಗೆ ರಾಷ್ಟ್ರಪತಿ ಭವನದ ಆವರಣದಲ್ಲಿ ಸೈನಿಕರು ಗೌರವ ವಂದನೆ ಸಲ್ಲಿಕೆ ಮಾಡಿದರು. 
ಇಂದು ಮ್ಯಾಕ್ರೋನ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಬೇಟಿ ಮಾಡಲಿದ್ದು, ದ್ವಿಪಕ್ಷೀಯ  ಮಾತುಕತೆ ನಡೆಸಲಿದ್ದಾರೆ. ಅಂತೆಯೇ ಉಭಯ ದೇಶಗಳ ನಾಯಕರುರಕ್ಷಣೆ, ಬಾಹ್ಯಾಕಾಶ, ಪರಮಾಣು ಸಹಕಾರ, ವ್ಯಾಪಾರ-ವಹಿವಾಟು ಸೇರಿದಂತೆ ವಿವಿಧ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆಗಳಿವೆ. 
ಕಳೆದ ರಾತ್ರಿ ಭಾರತಕ್ಕೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಅವರನ್ನು ಶಿಷ್ಟಾಚಾರ ಬದಿಗೊತ್ತಿ ಖುದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಆಲಿಂಗನದ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು. 
ಮಾ.11 ರಂದು ನಡೆಯಲಿರುವ ಅಂತರಾಷ್ಟ್ರೀಯ ಸೋಲಾರ್ ಅಲಯನ್ಸ್ (ಐಎಸ್ಎ) ಕಾರ್ಯಕ್ರದಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರೋನ್'ಅವರು ಪ್ರಧಾನಿ ಮೋದಿಯವರೊಂದಿಗೆ ಭಾಗವಹಿಸಲಿದ್ದು, ಮಾ.12 ರಂದು ವಾರಣಾಸಿಗೆ ಪ್ರವಾಸಕ್ಕೆ ತೆರಳಲಿದ್ದಾರೆಂದು ವರದಿಗಳು ತಿಳಿಸಿವೆ. 
ನಾಲ್ಕು ದಿನಗಳ ಪ್ರವಾಸದಲ್ಲಿ ಮ್ಯಾಕ್ರೋನ್ ಅವರು ತಮ್ಮ ಪತ್ನಿಯೊಂದಿಗೆ ವಿಶ್ವವಿಖ್ಯಾತ ತಾಜ್ ಮಹಲ್'ಗೂ ಭೇಟಿ ನೀಡುವ ಸಾಧ್ಯತೆಗಳಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

SCROLL FOR NEXT