ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ; ಭಾರತ ಮತ್ತು ಫ್ರಾನ್ಸ್ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಭಾರತ ಭೇಟಿ ಬಹಳ ಸಂತಸ ಹಾಗೂ ಹೆಮ್ಮೆಯನ್ನು ತಂದಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಅವರು ಶನಿವಾರ ಹೇಳಿದ್ದಾರೆ.
ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷರಿಗೆ ಭಾರತೀಯ ಸೈನಿಕರು ಗೌರವ ವಂದನೆ ಸಲ್ಲಿಸಿದರು. ಗೌರವ ವಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಮ್ಯಾಕ್ರೋನ್ ಅವರು, ಭಾರತಕ್ಕೆ ಭೇಟಿ ನೀಡಿರುವುದು ಬಹಳ ಸಂತಸವನ್ನು ತಂದಿದೆ. ಭಾರತ ಭೇಟಿ ಹೆಮ್ಮೆ ಎನಿಸುತ್ತಿದೆ. ನನ್ನನ್ನು ಸ್ವಾಗತಿಸಿದ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಭಾರತ ಹಾಗೂ ಫ್ರಾನ್ಸ್ ನಡುವೆ ಉತ್ತಮ ಬಾಂಧವ್ಯವವಿದೆ. ಎರಡು ಅತ್ಯುತ್ತಮ ಪ್ರಜಾಪ್ರಭುತ್ವ ರಾಷ್ಟ್ರಗಳು ಐತಿಹಾಸಿಕ ಸಂಬಂಧವನ್ನು ಹೊಂದಿದೆ. ಈ ಭೇಟಿ ಮುಂದಿನ ದಶಕಗಳಲ್ಲಿ ಕಾರ್ಯತಂತ್ರದ ಪಾಲುದಾರಿಕೆಯ ಹೊಸ ಯುಗವನ್ನು ಆರಂಭಿಸುತ್ತದೆ.
ಎರಡೂ ರಾಷ್ಟ್ರಗಳು ಭಯೋತ್ಪಾದನೆಯಂದಹ ಬೆದರಿಕೆಗಳ ಸಮಸ್ಯೆಗಳ ವಿರುದ್ಧ ಹೋರಾಟ ಮಾಡುತ್ತಿವೆ. ನಮ್ಮ ಇತಿಹಾಸವನ್ನು ಹಾಗೂ ದೇಶದ ಸ್ವಾತಂತ್ರ್ಯವನ್ನು ರಕ್ಷಣೆ ಮಾಡಬೇಕು. ಯುರೋಪಿನಲ್ಲಿ ನನ್ನ ದೇಶ ಅತ್ಯುತ್ತಮ ಪಾಲುದಾರನಾಗಬೇಕೆಂದು ನಾನು ಬಯಸುತ್ತೇನೆ. ಭಾರತೀಯ ನಾಗರೀಕರು ವಿದ್ಯಾಭ್ಯಾಸಕ್ಕೆ ಫ್ರಾನ್ಸ್ ಗೆ ಆಗಮಿಸಬೇಕೆಂದು ತಿಳಿಸಿದ್ದಾರೆ,