ದೇಶ

ಪ್ರಧಾನಿ ಮೋದಿ, ನಾನು ಸೌರ ಇಂಧನಕ್ಕೆ ಬದ್ಧರಾಗಿದ್ದೇವೆ: ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರಾನ್

Sumana Upadhyaya

ನವದೆಹಲಿ: ಸೌರ ವಿದ್ಯುತ್ ಉತ್ಪಾದನೆಗೆ ತಮ್ಮ ಯೋಜನೆಯನ್ನು ಸೂಚಿಸುವಂತೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ದುಂಡು ಸಭೆಯಲ್ಲಿ ಒತ್ತಾಯಿಸಿದ್ದಾರೆ.

ಭಾರತ ಪ್ರಧಾನಿ ಮೋದಿಯವರೊಂದಿಗೆ ನಾವು ಬದ್ಧರಾಗಿದ್ದು ಮತ್ತು ಒಂದೇ ರೀತಿಯ ಧ್ಯೇಯಗಳನ್ನು ಹೊಂದಿದ್ದು ಜನರನ್ನು ಪ್ರೇರೇಪಿಸಿ ಉತ್ತಮ ಫಲಿತಾಂಶವನ್ನು ಪಡೆಯಲು ಉತ್ಸುಕರಾಗಿದ್ದೇವೆ ಎಂದು ಹೇಳಿದರು.

ದೆಹಲಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ದುಂಡು ಸಭೆಯಲ್ಲಿ ಪ್ರಧಾನಿ ಮೋದಿ, ವಿಶ್ವಾದ್ಯಂತ ಸೌರ ಕ್ರಾಂತಿಯನ್ನು ತರಲು 10 ಕ್ರಿಯಾ ಯೋಜನೆಯನ್ನು ಗುರುತಿಸಿದರು.

ಭವಿಷ್ಯದಲ್ಲಿ ಏಳಿಗೆಯ ಬಗ್ಗೆ ನಾವು ಯೋಚಿಸಬೇಕು. ನನ್ನ ಮನಸ್ಸಿನಲ್ಲಿ 10ಕ್ರಿಯಾ ಯೋಜನೆಗಳ ಅಂಶವಿದ್ದು ಅದನ್ನು ನಾನು ನಿಮ್ಮ ಜೊತೆ ಹಂಚಿಕೊಳ್ಳಬೇಕಿದೆ. ಇಂದು ಉತ್ತಮವಾದ ಮತ್ತು ಕೈಗೆಟಕುವ ದರದಲ್ಲಿ ಸೌರ ತಂತ್ರಜ್ಞಾನ ಸಿಗುತ್ತಿದ್ದು ಅದನ್ನು ಎಲ್ಲರೂ ಬಳಸಿಕೊಳ್ಳಬೇಕು. ಇಂಧನ ಮೂಲದಲ್ಲಿ ಸೌರ ವಿದ್ಯುತ್ ನ ಭಾಗವನ್ನು ಬಳಸಿಕೊಳ್ಳಬೇಕು ಎಂದು ಪ್ರಧಾನಿ ಹೇಳಿದರು.

SCROLL FOR NEXT