ಸಂಗ್ರಹ ಚಿತ್ರ 
ದೇಶ

ದೋಷ ಶಂಕೆ: ಡಿಜಿಸಿಎಯಿಂದ ಪ್ರಾಟ್ ಅಂಡ್ ವಿಟ್ನಿ ಇಂಜಿನ್ ಹೊಂದಿರುವ 11 ವಿಮಾನಗಳ ಹಾರಾಟ ಸ್ಥಗಿತ

ಎಂಜಿನ್ ಗಳಲ್ಲಿ ದೋಷ ಕಂಡು ಬಂದಿರುವ ಹಿನ್ನಲೆಯಲ್ಲಿ ಕೇಂದ್ರ ನಾಗರೀಕ ವಿಮಾನಯಾನ ಪ್ರಾಧಿಕಾರ ಪ್ರಾಟ್ ಅಂಡ್ ವಿಟ್ನಿ ಇಂಜಿನ್ ಹೊಂದಿರುವ 11 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.

ನವದೆಹಲಿ: ಎಂಜಿನ್ ಗಳಲ್ಲಿ ದೋಷ ಕಂಡು ಬಂದಿರುವ ಹಿನ್ನಲೆಯಲ್ಲಿ ಕೇಂದ್ರ ನಾಗರೀಕ ವಿಮಾನಯಾನ ಪ್ರಾಧಿಕಾರ ಪ್ರಾಟ್ ಅಂಡ್ ವಿಟ್ನಿ ಇಂಜಿನ್ ಹೊಂದಿರುವ 11 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ದೇಶದ ವಿವಿಧ ವಿಮಾನಯಾನ ಸಂಸ್ಥೆಗಳು ಬಳಕೆ ಮಾಡುತ್ತಿರುವ ಹಲವು ವಿಮಾನಗಳ ಎಂಜಿನ್ ನಲ್ಲಿ ದೋಷ ಕಂಡುಬಂದಿದ್ದು, ಇದೇ ಕಾರಣಕ್ಕೆ ದೋಷ ಕಂಡುಬಂದಿರುವ ವಿಮಾನಗಳ ಹಾರಾಟವನ್ನು ಮುಂಜಾಗ್ರತಾ ಕ್ರಮವಾಗಿ ಡಿಜಿಸಿಎ ಸ್ಥಗಿತಗೊಳಿಸಿದೆ. ಇನ್ನು ಅಧಿಕಾರಿಗಳು ತಿಳಿಸಿರುವಂತೆ ಎ320 ನಿಯೋ ಏರ್ ಕ್ರಾಫ್ಟ್ ಸಂಸ್ಥೆಯ ಪ್ರಾಟ್ ಅಂಡ್ ವಿಟ್ನಿ ಎಂಜಿನ್ ಗಳಲ್ಲಿ ದೋಷ ಕಂಡು ಬಂದಿದ್ದು, ಈ ಬಗ್ಗೆ ಡಿಜಿಸಿಎಗೆ ಮಾಹಿತಿ ಲಭ್ಯವಾಗಿದ್ದು, ಇದೇ ಕಾರಣಕ್ಕೆ ದೇಶದ ವಿವಿಧ ವಿಮಾನಯಾನ ಸಂಸ್ಥೆಗಳ ಒಟ್ಟು 11 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸುವಂತೆ ಸೂಟನೆ ನೀಡಿದೆ.
ಡಿಜಿಸಿಎ ಮೂಲಗಳ ಪ್ರಕಾರ ಇಂಡಿಗೋ ವಿಮಾನಯಾನ ಸಂಸ್ಥೆಯೊಂದರ ಬಳಿಯಲ್ಲೇ 8 ಪ್ರಾಟ್ ಅಂಡ್ ವಿಟ್ನಿ ಇಂಜಿನ್ ಹೊಂದಿರುವ ವಿಮಾನಗಳಿದ್ದು, ಗೋ ಏರ್ ಸಂಸ್ಥೆಯ ಬಳಿ 3 ವಿಮಾನಗಳಿವೆ ಎಂದು ತಿಳಿದುಬಂದಿದೆ. ಇದೀಗ ತಾತ್ಕಾಲಿಕವಾಗಿ ಈ ಎಲ್ಲ 11 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ ಎಂದು  ತಿಳಿದುಬಂದಿದೆ. ಡಿಜಿಸಿಎ ನೀಡಿರುವ ಮಾಹಿತಿಯನ್ವಯ ಪ್ರಾಟ್ ಅಂಜ್ ವಿಟ್ನಿ ಎಂಜಿನ್ ಹೊಂದಿರುವ ವಿಮಾನಗಳಲ್ಲಿ ಮಾರ್ಗಮಧ್ಯೆ ದೋಷ ಕಂಡುಬಂದಿದ್ದು, ಇದು ಗಂಭೀರ ಪ್ರಕರಣವಾಗಿದೆ. ಹೀಗಾಗಿ ಈ ಬಗ್ಗೆ ಇತರೆ ವಿಮಾನಗಳಲ್ಲಿ ಶೋಧ ನಡೆಸಿದಾಗ ಇಜದೇ ರೀತಿಯ ಎಂಜಿನ್ ಗಳನ್ನು ಹೊಂದಿರುವ 11 ವಿಮಾನಗಳ ಎಂಜಿನ್ ನಲ್ಲೂ ದೋಷ ಕಂಡುಬಂದಿತ್ತು. ಹೀಗಾಗಿ ಎ320 ನಿಯೋದ ಪಿಡಲ್ಯೂ100 ಎಂಜಿನ್ ಹೊಂದಿರುವ ವಿಮಾನಗಳ ಹಾರಾಟವನ್ನು ಸ್ಥಗಿತಹಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಇರಾನ್ ನಲ್ಲಿ, ಇಂದು ನೇಪಾಳದಲ್ಲಿ ಬೊಂಬಾರ್ಡಿಯರ್ ವಿಮಾನಗಳ ಪತನವಾಗಿತ್ತು. ಈ ಹಿನ್ನಲೆಯಲ್ಲಿ ದೇಶದ ವಿಮಾನಗಳ ವಸ್ತುಸ್ಥಿತಿ ವರದಿಗಾಗಿ ಶೋಧ ನಡೆಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್