ದೇಶ

ಛತ್ತೀಸ್‏ಗಢ ನಕ್ಸಲ್ ದಾಳಿ ಒಂದು ’ದುರಂತ’: ರಾಹುಲ್ ಗಾಂಧಿ

Raghavendra Adiga
ನವದೆಹಲಿ: ಛತ್ತೀಸ್‏ಗಢದಲ್ಲಿ ನಡೆದ ನಕ್ಸಲ್ ದಾಳಿ ಒಂದು ’ದುರಂತ’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಣ್ಣಿಸಿದ್ದು ಇದಕ್ಕೆ ಸರ್ಕಾರದ ’ದೊಷಪೂರಿತ ನೀತಿ’ ಕಾರಣ ಎಂದಿದ್ದಾರೆ.
"ಛತ್ತೀಸ್‏ಗಢದಲ್ಲಿ  ಮಾವೋವಾದಿಗಳು ನಡೆಸಿದ ದಾಳಿಗೆ ಒಂಭತ್ತು ಸಿಆರ್‏ಪಿಎಫ್ ಸಾವನ್ನಪ್ಪಿದ್ದಾರೆ. ಇದೊಂದು ದುರಂತ, ಇದು ಛತ್ತೀಸ್‏ಗಢದಲ್ಲಿ  ಕ್ಷೀಣಿಸುತ್ತಿರುವ ಆಂತರಿಕ ಭದ್ರತಾ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ." ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.
"ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನನ್ನ ಸಂತಾಪವಿದೆ. ಗಾಯಗೊಂಡ ಜವಾನರು ಶೀಘ್ರವಾಗಿ ಗುಣಮುಖರಾಗಲೆಂದು ನಾನು ಬಯಸುತ್ತೇನೆ" ರಾಹುಲ್ ತಮ್ಮ ಎರಡನೇ ಟ್ವೀಟ್ ನಲ್ಲಿ ಹೇಳಿದ್ದಾರೆ.
ಇದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಮಧ್ಯ ಪ್ರದೇಶ ಮುಖ್ಯಮಂತ್ರಿ ರಮಣ್ ಸಿಂಗ್ ಸಹ ಘಟನೆ ಕುರಿತಂತೆ ಸಂತಾಪ ವ್ಯಕ್ತಪಡಿಸಿದ್ದರು.
ಛತ್ತೀಸ್‏ಗಢದಲ್ಲಿ ನಕ್ಸಲರು ನಡೆಸಿದ ಭೀಕರ ಸ್ಪೋಟದಲ್ಲಿ ಒಂಭತ್ತು ಸಿಆರ್‏ಪಿಎಫ್ ಯೋಧರು ಹುತಾತ್ಮರಾಗಿದ್ದು ಇಬ್ಬರು ಗಾಯಗೊಂಡಿದ್ದರು..
SCROLL FOR NEXT