ಸಂಸತ್ತು 
ದೇಶ

ಹಣಕಾಸು ಮಸೂದೆ ಲೋಕಸಭೆಯಲ್ಲಿ ಅನುಮೋದನೆ

ವಿರೋಧ ಪಕ್ಷಗಳ ತೀವ್ರ ಗದ್ದಲ, ಕೋಲಾಹಲಗಳ ನಡುವೆ ಲೋಕಸಭೆಯಲ್ಲಿ ಬುಧವಾರ ಹಣಕಾಸು ...

ನವದೆಹಲಿ: ವಿರೋಧ ಪಕ್ಷಗಳ ತೀವ್ರ ಗದ್ದಲ, ಕೋಲಾಹಲಗಳ ನಡುವೆ ಲೋಕಸಭೆಯಲ್ಲಿ ಬುಧವಾರ ಹಣಕಾಸು ಮಸೂದೆ 2018 ಅನುಮೋದನೆಗೊಂಡಿತು.

ಸದನದಲ್ಲಿ ಚರ್ಚೆ ನಡೆಸದೆ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹಣಕಾಸು ಮಸೂದೆಯನ್ನು ಕೆಳಸದನದಲ್ಲಿ ಅನುಮೋದನೆ ಮಾಡಿದ್ದಕ್ಕೆ ಪ್ರತಿಪಕ್ಷಗಳು ಇಂದು ಲೋಕಸಭೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದವು.
 
ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷೆ ಸುಮಿತ್ರಾ ಮಹಾಜನ್, ಹಣಕಾಸು ಮಸೂದೆ ಅನುಮೋದನೆಗೊಂಡಿದ್ದು, ಈ ಬಗ್ಗೆ ಸಂಸದರು ಚರ್ಚೆಗೆ ಒತ್ತಾಯಿಸುತ್ತಿದ್ದಾರೆ ಎಂದರು.

ಹಣಕಾಸಿನ ವಿಷಯಗಳನ್ನು ಸದನದಲ್ಲಿ ಚರ್ಚೆ ನಡೆಸದೆ ಅನುಮೋದನೆ ಮಾಡಿರುವುದು ಕೇಂದ್ರ ಸರ್ಕಾರದ ಅಹಂಕಾರದ ಮತ್ತು ಏಕಪಕ್ಷೀಯ ನಿರ್ಧಾರವನ್ನು ತೋರಿಸುತ್ತದೆ ಎಂದು ವಿರೋಧ ಪಕ್ಷಗಳ ಸಂಸದರು ಹೇಳಿದ್ದಾರೆ ಎಂದು ಸ್ಪೀಕರ್ ಓದಿದರು.

ವಿವಾದಾತ್ಮಕವಾಗಿ, ಹಣಕಾಸು ಮಸೂದೆಯನ್ನು ಸಂವಿಧಾನದ 110 ನೇ (1) (ಎ) ಕಾಯ್ದೆಯ ಅಗತ್ಯತೆಗಳನ್ನು ಪೂರೈಸುವ ಬದಲು ವಾರ್ಷಿಕ ಹಣಕಾಸು ಹೇಳಿಕೆ ಜೊತೆಗೆ ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ನೀಡಲಾಯಿತು, ಇದು ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾವಿಸಿದ ಪ್ರಸ್ತಾಪಿತ ತೆರಿಗೆಗಳ ನಿಯಂತ್ರಣ, ಪ್ರಸ್ತಾವನೆ, ರದ್ದುಗೊಳಿಸುವಿಕೆ, ಬದಲಾವಣೆಯನ್ನು ವಿವರಿಸುತ್ತದೆ.

ಬಜೆಟ್ ಗೆ ಸಂಬಂಧಪಟ್ಟ ಎಲ್ಲಾ ಸಾಧ್ಯತೆಗಳನ್ನು ಹಣಕಾಸು ಮಸೂದೆ ಒಳಗೊಂಡಿದ್ದು ಅದನ್ನು ಹಣ ಮಸೂದೆ ಎಂದು ವರ್ಗೀಕರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT