ದೇಶ

ವಿಶ್ವ ವಿಖ್ಯಾತ ಭೌತ ವಿಜ್ಞಾನಿಯಾಗಿದ್ದರೂ ಸ್ಟೀಫನ್ ಹಾಕಿಂಗ್ ಗೆ ನೊಬೆಲ್ ಕೈತಪ್ಪಿದ್ದೇಕೆ ಗೊತ್ತೆ?

Srinivas Rao BV
ನವದೆಹಲಿ: ಸ್ಟೀಫನ್ ಹಾಕಿಂಗ್ ವಿಶ್ವಕಂಡ ಶ್ರೇಷ್ಠ ಭೌತ ವಿಜ್ಞಾನಿ. ವಿಶ್ವ ಕಂಡ ಅದ್ಭುತ ವಿಜ್ಞಾನಿಯಾಗಿದ್ದರೂ ಸಹ ಸ್ಟೀಫನ್ ಹಾಕಿಂಗ್ ಗೆ ನೊಬೆಲ್ ಪ್ರಶಸ್ತಿ ಕೈತಪ್ಪಿತ್ತು. 
ಹಾಕಿಂಗ್ ಗೆ ನೊಬೆಲ್ ಪ್ರಶಸ್ತಿ ಕೈತಪ್ಪಲು ಕಪ್ಪು ಕುಳಿಗಳ ರಹಸ್ಯ ಬೇಧಿಸಿದ್ದ ಅವರ ಸಿದ್ಧಾಂತಗಳನ್ನು ಪರಿಶೀಲನೆ ನಡೆಸದೇ ಇರುವುದೇ ಕಾರಣ ಎಂದು ಹೇಳಲಾಗುತ್ತದೆ.  ಕಪ್ಪು ಕುಳಿಗಳ ಬಗೆಗಿನ ಹಾಕಿಂಗ್ ಸಿಧ್ದಾಂತ ಒಪ್ಪಿತವಾಗಿತ್ತಾದರೂ ಅದನ್ನು ಪರಿಶೀಲನೆ ನಡೆಸದೇ ಇದ್ದದ್ದು ನೊಬೆಲ್ ಪ್ರಶಸ್ತಿ ಕೈ ತಪ್ಪಲು ಕಾರಣವಾಗಿದೆ. 
ದಿ ಸೈನ್ಸ್ ಆಫ್ ಲಿಬರ್ಟಿಯ ಲೇಖಕ ತಿಮೋತಿ ಫೆರ್ರಿಸ್ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಈ ಸಿದ್ಧಾಂತವನ್ನು ಪರಿಶೀಲನೆ ನಡೆಸುವ ವಿಧಾನ ಇಲ್ಲ, ಕಪ್ಪು ಕುಳಿಗಳ ಅಧ್ಯಯನವೇ ದೀರ್ಘಾವಧಿಯದ್ದು ಎಂದು ಹೇಳಿದ್ದಾರೆ.  ನೋಬೆಲ್ ಫೌಂಡೇಶನ್ ಮರಣೋತ್ತರವಾಗಿ ಯಾರಿಗೂ ನೋಬೆಲ್ ಪ್ರಶಸ್ತಿ ನೀಡುವುದಿಲ್ಲ. ಈಗ ಸ್ಟೀಫನ್ ಹಾಕಿಂಗ್ ಇಹ ಲೋಕ ತ್ಯಜಿಸಿದ್ದು, ವಿಶ್ವ ವಿಖ್ಯಾತ ಭೌತ ವಿಜ್ಞಾನಿಯಾಗಿದ್ದರೂ ಹಾಕಿಂಗ್ ಗೆ ನೊಬೆಲ್  ಕೈತಪ್ಪಿದೆ. ಆದರೆ ವಿಜ್ಞಾನ ಕ್ಷೇತ್ರ ಹಾಗೂ ಕಪ್ಪು ಕುಳಿಗಳ ಅಧ್ಯಯನಕ್ಕೆ ಅವರ ಕೊಡುಗೆ ಅನನ್ಯವಾದದ್ದು. 
SCROLL FOR NEXT