ದೇಶ

ರಾಜ್ಯಗಳು ಹೋಂ ಗಾರ್ಡ್ಸ್ ವೇತನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಆದೇಶ ಪಾಲಿಸುತ್ತಿಲ್ಲ: ಸಂಸದೀಯ ಸಮಿತಿ

Lingaraj Badiger
ನವದೆಹಲಿ: ಹೋಂ ಗಾರ್ಡ್ ಗಳ ಕರ್ತವ್ಯ ಭತ್ಯೆ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಬಹುತೇಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಆಡಳಿತ ಪ್ರದೇಶಗಳು ಉದ್ದೇಶಪೂರ್ವಕವಾಗಿಯೇ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೊಳಿಸುತ್ತಿಲ್ಲ ಎಂದು ಸಂಸದೀಯ ಸಮಿತಿ ಹೇಳಿದೆ.
ಕೇವಲ ಐದು ರಾಜ್ಯಗಳ ಮಾತ್ರ ಪೊಲೀಸ ಸಿಬ್ಬಂದಿ ನೀಡುವ ರೀತಿ ಮೂಲವೇತನದ ಮೇಲಿನ ಕರ್ತವ್ಯ ಭತ್ಯೆಯನ್ನು ಹೆಚ್ಚಿಸಿವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ನೇತೃತ್ವದ ಗೃಹ ವ್ಯವಹಾರಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿ ತಿಳಿಸಿದೆ.
ಈ ಕುರಿತು ಚಿದಂಬರಂ ನೇತೃತ್ವದ ಸ್ಥಾಯಿ ಸಮಿತಿ ಇಂದು ಸಂಸತ್ತಿಗೆ ತನ್ನ ವರದಿ ಸಲ್ಲಿಸಿದ್ದು, ಹೋಂ ಗಾರ್ಡ್ ಗಳ ಕರ್ತವ್ಯ ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದಂತೆ ಐದು ರಾಜ್ಯಗಳನ್ನು ಹೊರತುಪಡಿಸಿ ಇತರೆ ರಾಜ್ಯಗಳು ಸುಪ್ರೀಂ ಕೋರ್ಟ್ ಆದೇಶ ಪಾಲಿಸದಿರುವುದುರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಕೇಂದ್ರ ಗೃಹ ಇಲಾಖೆ ಪದೇಪದೆ ಸೂಚಿಸಿದರೂ ರಾಜ್ಯಗಳು ಉದ್ದೇಶಪೂರ್ವಕವಾಗಿಯೇ ಸುಪ್ರೀಂ ಆದೇಶ ಪಾಲಿಸುತ್ತಿಲ್ಲ ಎಂದು ಸ್ಥಾಯಿ ಸಮಿತಿ ದೂರಿದೆ.
SCROLL FOR NEXT