ನವದೆಹಲಿ: ಎಂಜಿನ್ ಗಳಲ್ಲಿ ದೋಷ ಕಂಡು ಬಂದಿರುವ ಹಿನ್ನಲೆಯಲ್ಲಿ ಖ್ಯಾತ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ ಮತ್ತು ಗೋ ಏರ್ ವಿಮಾನಯಾನ ಸಂಸ್ಥೆಗಳು ತಮ್ಮ ಕೆಲ ವಿಮಾನಗಳ ಭಾಗಶಃ ಹಾರಾಟವನ್ನು ಸ್ಥಗಿತಗೊಳಿಸಿದೆ.
ಮೂಲಗಳ ಪ್ರಕಾರ ದೇಶಾದ್ಯಂತ ಇಂಡಿಗೋ ವಿಮಾನಯಾನ ಸಂಸ್ಥೆಯ 488 ವಿಮಾನಗಳು ಹಾಗೂ ಗೋ ಏರ್ ಸಂಸ್ಥೆಯ 138 ವಿಮಾನಗಳು ಸೇರಿದಂತೆ ಒಟ್ಟು 600ಕ್ಕೂ ಹೆಚ್ಚು ನಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳು ತಿಳಿಸಿರುವಂತೆ ಪ್ರಾಟ್ ಅಂಡ್ ವಿಟ್ನಿ ಇಂಜಿನ್ ಹೊಂದಿರುವ 11 ಎ320 ನಿಯೋ ವಿಮಾನಗಳ ಎಂಜಿನ್ ದೋಷ ಬಂದ ಹಿನ್ನಲೆಯಲ್ಲಿ ಈ ಕ್ರಮ ಜರುಗಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಈ ಪ್ರಾಟ್ ಅಂಡ್ ವಿಟ್ನಿ ಇಂಜಿನ್ ಹೊಂದಿರುವ 11 ಎ320 ನಿಯೋ ವಿಮಾನಗಳ ಹಾರಾಟವನ್ನು ನಿಯಂತ್ರಿಸಲಾಗುತ್ತಿದೆ.
ಈ ಎರಡೂ ವಿಮಾನಯಾನ ಸಂಸ್ಥೆಗಳು ಪ್ರತಿನಿತ್ಯ 1200ಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ನಿಯಂತ್ರಿಸುತ್ತಿದ್ದು, ಇದೀಗ ಎಂಜಿನ್ ನಲ್ಲಿ ದೋಷ ಕಂಡುಬಂದ ಹಿನ್ನಲೆಯಲ್ಲಿ ಈ ವಿಮಾನಯಾನ ಸಂಸ್ಥೆಗಳ ವಿಮಾನ ಹಾರಾಟ ವ್ಯವಸ್ಥೆ ಹಾಗೂ ಆದಾಯ ಅರ್ಧಕ್ಕೆ ಮಿತಿಗೊಂಡಿದೆ. ಪ್ರಮುಖವಾಗಿ ಬೇಸಿಗೆ ಸಮಯದಲ್ಲಿ ಪ್ರವಾಸಿಗರ ಪ್ರಯಾಣವನ್ನೇ ನೆಚ್ಚಿಕೊಂಡಿದ್ದ ಈ ವಿಮಾನಯಾನ ಸಂಸ್ಥೆಗಳ ಆದಾಯಕ್ಕೆ ಇದೀಗ ಎಂಜಿನ್ ದೋಷ ಸಮಸ್ಯೆಯಿಂದಾಗಿ ಖೋತಾ ಆದಂತಾಗಿದೆ.
ಈ ಹಿಂದೆ ಎಂಜಿನ್ ಗಳಲ್ಲಿ ದೋಷ ಕಂಡು ಬಂದ ವಿಚಾರಕ್ಕೆ ಸಂಬಂಧಿಸಿದಂತೆ ಕ್ರಮ ಜರುಗಿಸಿದ್ದ ಕೇಂದ್ರ ನಾಗರಿಕ ವಿಮಾನಯಾನ ಪ್ರಾಧಿಕಾರ ಪ್ರಾಟ್ ಅಂಡ್ ವಿಟ್ನಿ ಇಂಜಿನ್ ಹೊಂದಿರುವ 11ಎ320 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics