ಹೃಷಿಕೇಶದಲ್ಲಿ ರಜನೀಕಾಂತ್ 
ದೇಶ

ಹೃಷಿಕೇಶದಲ್ಲಿ ಸೂಪರ್ ಸ್ಟಾರ್: ಸಾಧು ಸಂತರಿಗೆ ಭೋಜನ ವ್ಯವಸ್ಥೆ ಮಾಡಿದ ರಜನಿ

ತಮಿಳು ನಟ ಸೂಪರ್ ಸ್ಟಾರ್ ರಜನೀಕಾಂತ್ ಹೃಷಿಕೇಶದ ಸ್ವಾಮಿ ದಯಾನಂದ ಸ್ವಾಮಿ ಆಶ್ರಮಕ್ಕೆ ತೆರಳಿ ಸಂತರನ್ನು ಭೇಟಿಯಾಗಿದ್ದಾರೆ....

ನವದೆಹಲಿ: ತಮಿಳು ನಟ ಸೂಪರ್ ಸ್ಟಾರ್ ರಜನೀಕಾಂತ್ ಹೃಷಿಕೇಶದ ಸ್ವಾಮಿ ದಯಾನಂದ ಸ್ವಾಮಿ ಆಶ್ರಮಕ್ಕೆ ತೆರಳಿ ಸಂತರನ್ನು ಭೇಟಿಯಾಗಿದ್ದಾರೆ.
ಪ್ರತಿ ವರ್ಷ ಅಧಾತ್ಮ ಪ್ರವಾಸ ಕೈಗೊಳ್ಳುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಈ ವರ್ಷವೂ ಉತ್ತರ ಭಾರತದ ಕೆಲವೆಡೆ ಪ್ರವಾಸ ಆರಂಭಿಸಿದ್ದು,  ಮಂಗಳವಾರ ಉತ್ತರಾಖಂಡದ ಆಶ್ರಮಕ್ಕೆ ತೆರಳಿದ್ದರು. 
ಉತ್ತರಾಖಂಡದ ಸ್ವಾಮಿ ದಯಾನಂದ ಆಶ್ರಮದಲ್ಲಿ ಪ್ರಾರ್ಥನೆ ಸಲ್ಲಿಸಿದ ರಜನಿಕಾಂತ್, ಅವರಿಗಾಗಿ ಹೊರಗೆ ಕಾದು ನಿಂತಿದ್ದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. 
ತಾವು ಅಧ್ಯಾತ್ಮ ಪ್ರವಾಸದಲ್ಲಿದ್ದು, ಈ ಸಂದರ್ಭದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಈ ವರ್ಷದ ಆರಂಭದಲ್ಲಿ ರಜನೀಕಾಂತ್ ರಾಜಕೀಯ ಪ್ರವೇಶಿಸಲಿದ್ದು, ಹೊಸ ಪಕ್ಷ ಕಟ್ಟುವ ಘೋಷಣೆ ಮಾಡುವುದಾಗಿ ಹೇಳಿದ್ದರು, ಸಕ್ರಿಯ ರಾಜಕಾರಣದಲ್ಲಿದ್ದುಕೊಂಡು ತಮಿಳುನಾಡಿನ 234 ವಿಧಾನಾಸಭೆ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದ್ದರು, ಆದರೆ ಇದುವರೆಗೂ ರಜನೀಕಾಂತ್ ತಮ್ಮ ಪಕ್ಷದ ಹೆಸರನ್ನು ಘೋಷಿಸಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ಹಳ್ಳ ಹಿಡೀತಾ ಸಂಧಾನ ಮಾತುಕತೆ?: ಹಾರ್ಮೊಜ್ ದಾಟಿದ ಅಮೆರಿಕದ 2 ಯುದ್ಧ ನೌಕೆಗಳು!

ಒಂದು ಕಡೆ ಪಾಕಿಸ್ತಾನದಲ್ಲಿ ಶಾಂತಿ ಮಾತುಕತೆ, ಮತ್ತೊಂದು ಕಡೆ ಲೆಬನಾನ್‌ ಮೇಲೆ ದಾಳಿ ಮುಂದುವರೆಸಿದ ಇಸ್ರೇಲ್

ಮಧ್ಯಸ್ಥಿಕೆ ಯಾರೇ ವಹಿಸಲಿ ಅದರಿಂದ ಭಾರತಕ್ಕೇ ಲಾಭ! US ಜೊತೆ ಅಂಥಹ ಸಂಬಂಧ ಬೆಳಸಲು ಪಾಕ್ ಗೆ ಮಾತ್ರ ಸಾಧ್ಯ, ಬೇರಾರಿಗೂ ಅಲ್ಲ: ತರೂರ್ ವ್ಯಂಗ್ಯ

SCROLL FOR NEXT