ದೇಶ

ಐನ್ಸ್ಟೈನ್ ಸಿದ್ಧಾಂತಕ್ಕಿಂತ ವೇದದ ಸಿದ್ಧಾಂತ ಉನ್ನತ ಎಂದು ಸ್ಟೀಫನ್ ಹಾಕಿಂಗ್ ಹೇಳಿದ್ದರು: ಕೇಂದ್ರ ಸಚಿವ ಹರ್ಷವರ್ಧನ್

Srinivas Rao BV
ಇಂಫಾಲ: ಪ್ರತಿ ಬಾರಿ ಭಾರತೀಯ ವಿಜ್ಞಾನ ಕಾಂಗ್ರೆಸ್ ನಡೆದಾಗಲೂ ಅಲ್ಲಿ ಭಾಷಣ ಮಾಡುವವರು ನೀಡುವ ಹೇಳಿಕೆಗಳು ಚರ್ಚೆಗೆ ಗ್ರಾಸವಾಗುತ್ತವೆ. ಅಂಥಹದ್ದೇ ಘಟನೆ ಈ ಬಾರಿಯ ಭಾರತೀಯ ವಿಜ್ಞಾನ ಕಾಂಗ್ರೆಸ್ ನಲ್ಲೂ ನಡೆದಿದ್ದು, ಐನ್ಸ್ಟೈನ್ ಸಿದ್ಧಾಂತಕ್ಕಿಂತ ವೇದದ ಸಿದ್ಧಾಂತ ಉನ್ನತ ಎಂದು ಸ್ಟೀಫನ್ ಹಾಕಿಂಗ್ ಹೇಳಿದ್ದಾಗಿ ಕೇಂದ್ರ ತಂತ್ರಜ್ಞಾನ ಹಾಗೂ ವಿಜ್ಞಾನ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. 
ಭಾರತೀಯ ವಿಜ್ಞಾನ ಕಾಂಗ್ರೆಸ್ ನಲ್ಲಿ ಮಾತನಾಡಿರುವ ಅವರು, ಇತ್ತೀಚೆಗಷ್ಟೇ ನಿಧನರಾದ ಸ್ಟೀಫನ್ ಹಾಕಿಂಗ್ ಅವರನ್ನು ಉಲ್ಲೇಖಿಸಿದ್ದು, ಐನ್ಸ್ಟೈನ್ ಅವರ e=mc2 ಸಿದ್ಧಾಂತ (ಸಾಪೇಕ್ಷತಾ ಸಿದ್ಧಾಂತ)ಕ್ಕಿಂತ ವೈದಿಕ ಸಿದ್ಧಾಂತ ಉನ್ನತವಾದದ್ದು ಎಂದು ಸ್ಟೀಫನ್ ಹಾಕಿಂಗ್ ಹೇಳಿದ್ದರು ಎಂದಿದ್ದಾರೆ. 
ಹೇಳಿಕೆಗೆ ಆಧಾರವನ್ನು ಕೇಳಿದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಹರ್ಷವರ್ಧನ್, ನೀವು ಆಧಾರವನ್ನು ಕಂಡುಕೊಳ್ಳಿ, ಸಾಪೇಕ್ಷತಾ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಐನ್ಸ್ಟೈನ್ ನೀಡಿರುವ ಸಿದ್ಧಾಂತಕ್ಕಿಂತ ವೇದಗಳಲ್ಲಿ ಹೆಚ್ಚು ಮೌಲ್ಯಯುತವಾದ ಸಿದ್ಧಾಂತ ಇರುವ ಸಾಧ್ಯತೆಗಳಿವೆ ಎಂದು  ಸ್ಟೀಫನ್ ಹಾಕಿಂಗ್ ಹೇಳಿರುವುದು ದಾಖಲಾಗಿದೆ ನೀವೂ ಸಹ ಇದಕ್ಕೆ ಸಂಬಂಧಪಟ್ಟಂತೆ ಕೆಲಸ ಮಾಡಿ ಎಂದು ಹೇಳಿದ್ದಾರೆ. 
SCROLL FOR NEXT