ಇಂಫಾಲ: ಸಂಶೋಧನೆಗಳನ್ನು ಲ್ಯಾಬ್ ನಿಂದ ಲ್ಯಾಂಡ್ ಗೆ ವಿಸ್ತರಿಸುವಂತೆ ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಮಾ.16 ರಂದು 105 ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಆರ್ಽಡಿ ಅಂದರೆ ರಿಸರ್ಚ್ ಫಾರ್ ಡೆವಲಪ್ಮೆಂಟ್ ಆಫ್ ದಿ ನೇಷನ್ ಎಂದಾಗಬೇಕು ಎಂದು ಹೇಳಿದ್ದಾರೆ. ಭಾರತ ತಂತ್ರಜ್ಞಾನದ ಬಳಕೆ ಹಾಗೂ ಆವಿಷ್ಕಾರಗಳ ಪರಂಪರೆಯನ್ನು ಹೊಂದಿದೆ. ನಾವು ವಿಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರಗಳ ಸಾಲಿನಲ್ಲಿ ಮತ್ತೆ ಗುರುತಿಸಿಕೊಳ್ಳಬೇಕಿದೆ ಎಂದು ಮೋದಿ ಹೇಳಿದ್ದಾರೆ.
ನಮ್ಮ ವೈಜ್ಞಾನಿಕ ಸಾಧನೆಗಳ ಬಗ್ಗೆ ಸಮಾಜದೊಂದಿಗೆ ಸಂವಹನ ನಡೆಸುವ ಅಗತ್ಯವಿದ್ದು, ಸಂಶೋಧನೆಯನ್ನು ಲ್ಯಾಬ್ ನಿಂದ ಲ್ಯಾಂಡ್ ಗೆ ವಿಸ್ತರಿಸಿ ಎಂದು ಮೋದಿ ವಿಜ್ಞಾನಿಗಳಿಗೆ ಕರೆ ನೀಡಿದ್ದಾರೆ.