ಸಂಗ್ರಹ ಚಿತ್ರ 
ದೇಶ

ಇರುವ ಶಸ್ತ್ರಾಸ್ತ್ರಗಳಿಂದಲೇ ಹೋರಾಡುವ ಸಾಮರ್ಥ್ಯ ಸೇನೆಗಿದೆ: ಬಿಪಿನ್ ರಾವತ್

ಹಾಲಿ ಇರುವ ಶಸ್ತ್ರಾಸ್ತ್ರಗಳಿಂದಲೇ ಹೋರಾಡುವ ಸಾಮರ್ಥ್ಯ ಭಾರತೀಯ ಸೇನೆಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ನವದೆಹಲಿ: ಹಾಲಿ ಇರುವ ಶಸ್ತ್ರಾಸ್ತ್ರಗಳಿಂದಲೇ ಹೋರಾಡುವ ಸಾಮರ್ಥ್ಯ ಭಾರತೀಯ ಸೇನೆಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ಭಾರತೀಯ ಸೇನೆಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಅಗತ್ಯತೆ ಇದ್ದು, ಶಸ್ತ್ರಾಸ್ತ್ರ ದಾಸ್ತಾನಿಗೆ ಆರ್ಥಿಕ ಕೊರತೆ ಇದೆ ಎಂಬ ವರದಿಗಳ ಹಿನ್ನಲೆಯಲ್ಲಿ ಭಾನುವಾರ ಮಾತನಾಡಿದ ಬಿಪಿನ್ ರಾವತ್, ಭಾರತೀಯ ಸೇನೆಗೆ ಶಸ್ತ್ರಾಸ್ತ್ರ ಕೊರತೆ ಇದೆ. ಆದರೆ ರಾತ್ರೋ ರಾತ್ರಿ ಅದನ್ನು ಸಂಪೂರ್ಣವಾಗಿ ತುಂಬಲು ಸಾಧ್ಯವಿಲ್ಲ. ಹೀಗಾಗಿ ಪ್ರಸ್ತುತ ಬಿಡುಗಡೆಯಾಗದಿರು ವರದಿಯಲ್ಲಿ ಹೊಸತೇನೂ ಇಲ್ಲ.  ಕಳೆದ ಹಲವು ವರ್ಷಗಳಿಂದಲೂ ಇಂತಹ ವರದಿಗಳು ಪ್ರಸಾರವಾಗುತ್ತಿವೆ, ಆದರೆ ಭಾರತೀಯ ಸೇನೆಯ ಸೈನಿಕರು ತರಬೇತಿ ಪಡೆದ ಯೋಧರಾಗಿದ್ದು, ಯಾವುದೇ ರೀತಿಯ ಪರಿಸ್ಥಿತಿಯಲ್ಲೂ ತಮಗೆ ದೊರೆತ ಶಸ್ತ್ರಾಸ್ತ್ರಗಳಿಂದ ಹೋರಾಡಬಲ್ಲರು ಎಂದು ಹೇಳಿದ್ದಾರೆ.
ಅಂತೆಯೇ ಅರೆ ಸೇನಾ ಪಡೆಗಳೂ ಕೂಡ ಇದೇ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುತ್ತಿದೆ. ಶಸ್ತ್ರಾಸ್ತ್ರ ಖರೀದಿ ಎಂದರೆ ದಿನಸಿ ಅಂಗಡಿಗೆ ಹೋಗಿ ಬಂದ ಹಾಗೆ ಅಲ್ಲ. ಅದಕ್ಕೆ ತನ್ನದೇ ಆದ ನೀತಿ ನಿಯಮಗಳಿವೆ. ಮೊದಲು ಬೇಕಾದಷ್ಟು ಶಸ್ತ್ರಾಸ್ತ್ರಗಳಿಗೆ ಹಣ ನೀಡಿ ಬಳಿಕ ಅವುಗಳನ್ನು ಆಮದು ಮಾಡಿಕೊಳ್ಳಬೇಕು. ಶಸ್ತ್ರಾಸ್ತ್ರ ಖರೀದಿ ಸಂಬಂಧ ಪ್ರಕ್ರಿಯೆಗಲು ಚಾಲನೆಯಲ್ಲಿವೆ ಎಂದು ರಾವತ್ ಹೇಳಿದ್ದಾರೆ.
ಈ ಹಿಂದೆ ಭಾರತೀಯ ಸೇನೆ ತೀವ್ರ ಶಸ್ತ್ರಾಸ್ತ್ರ ಕೊರತೆ ಎದುರಿಸುತ್ತಿದ್ದು, ಶಸ್ತ್ರಾಸ್ತ್ರ ಕೊಳ್ಳಲು ಸೇನೆ ಬಳಿ ಸೂಕ್ತ ಹಣವಿಲ್ಲ ಎಂದು ವರದಿಯಾಗಿತ್ತು. ಅಲ್ಲದೆ ಈ ಸಂಬಂಧ ಸಂಸದೀಯ ಸ್ಥಾಯಿ ಸಮಿತಿಗೂ ವರದಿ ನೀಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ವಿಜಯೇಂದ್ರ ಮಾತನ್ನು ನಂಬುತ್ತೇನೆ, ಆದ್ರೆ...: BJPಗೆ ಘರ್ ವಾಪ್ಸಿ ಬಗ್ಗೆ ಈಶ್ವರಪ್ಪ ಶಾಕಿಂಗ್ ಹೇಳಿಕೆ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ