ಅಯೋಧ್ಯೆ(ಉತ್ತರ ಪ್ರದೇಶ): ರಾಮ ಜನ್ಮಭೂಮಿಗಾಗಿ ಹಿಂದೂಗಳು ಇನ್ನೊಂದು ಮಹಾ ತ್ಯಾಗಕ್ಕೆ ಸಿದ್ದರಾಗಬೇಕು. ಇದೀಗ ರಾಮಜನ್ಮ ಭೂಮಿಯು ಹಿಂದೂಗಳಿಂದ ಇನ್ನೊಂದು ಬಲಿದಾನವನ್ನು ಕೇಳುತ್ತಿದೆ ಎಂದು ಬಿಜೆಪಿ ಮುಖಂಡ ವಿನಯ್ ಕಟಿಯಾರ್ ವಿವಾದಾತ್ಮಕ ಹೇಳಿಕೆ ನಿಡಿದ್ದಾರೆ.
"ರಾಮ ಜನ್ಮಭೂಮಿಗಾಗಿ ಹಿಂದೂಅಳು ಇನ್ನೊಮ್ಮೆ ತ್ಯಾಗಕ್ಕೆ ಸಿದ್ದರಾಗಬೇಕೆಂದು ನಾನು ಬಯಸುತ್ತೇನೆ. 1992ರ ಡಿಸೆಂಬರ್ ನಲ್ಲಿ ಮುಲಾಯಂ ಸರ್ಕಾರದ ಕ್ರಮದಿಂದ ಅನೇಕರು ಪ್ರಾಣ ತೆತ್ತರು. ಇದೀಗ ಮತ್ತೆ ಅಂಹತಾ ಕ್ರಾಂತಿಯೊಂದರ ಅಗತ್ಯವಿದೆ. ಹಿಂದೂಗಳು ತಾವು ಹುತಾತ್ಮರಾಗಲು ಸಿದ್ದರಾಗಬೇಕು" ಸಂಸದ ವಿನಯ್ ಕಟಿಯಾರ್ ಹೇಳಿದರು.
1992ರ ಡಿಸೆಂಬರ್ 6ರಂದು ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಕರ ಸೇವಕರು ದ್ವಂಸ ಮಾಡಿದ್ದರು. ಇದಾದ ಕೆಲ ದಿನಗಳ ಕಾಲ ಸಂಭವಿಸಿದ ಗಲಭೆಗಲಲ್ಲಿ ಸುಮಾರು ಎರಡು ಸಾವಿರ ಮಂದಿ ಮೃತಪಟ್ಟಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos